Friday, March 13, 2026
ಸುದ್ದಿ

ಯಕ್ಷರಂಗದಲ್ಲಿ ವಜ್ರದಂತೆ ಮಿಂಚುತಿರುವ ಯಕ್ಷಪ್ರತಿಬೆ ಉಪಾಸನ ಪಂಜಿರಿಕೆ – ಕಹಳೆ ನ್ಯೂಸ್

ಯಕ್ಷರಂಗಕ್ಕೆ ಒಂದು ವಜ್ರದಂತಹ ಯಕ್ಷಪ್ರತಿಭೆ ರಂಗಸಿರಿ ಸಾಂಸ್ಕೃತಿಕ ವೇದಿಕೆ ಕಾಸರಗೋಡು ಬಡಿಯಡ್ಕದಲ್ಲಿ ಮಿಂಚುತ್ತಿರುವ ಉಪಾಸನ ಪಂಜಿರಿಕೆ. ಪುಟ್ಟ ವಯಸ್ಸಿನಲ್ಲಿಯೇ ಯಕ್ಷರಂಗಕ್ಕೆ ಹೆಜ್ಜೆ ಇಟ್ಟು ಇದೀಗ ಅದ್ಭುತ ಸಾಧನೆಯನ್ನು ಮಾಡುತ್ತಿದ್ದಾರೆ. ಪ್ರತಿಯೊಂದು ಮಗುವು ಕೂಡ ತನ್ನದೆಯಾದ ಪ್ರತಿಭೆಯನ್ನು ಹೊಂದಿರುತ್ತದೆ. ಈ ಪ್ರತಿಭೆಗೆ ಯಕ್ಷಗಾನ ಹಾಗೂ ಸಂಗೀತ ಅಂದರೆ ಪಂಚಪ್ರಾಣ. ಯಕ್ಷಗಾನದಲ್ಲಿ ಈಗಾಗಲೆ ಬಹಳಷ್ಟು ಯಕ್ಷದಿಗ್ಗಜರೊಂದಿಗೆ ವೇದಿಕೆಯಲ್ಲಿ ಅಭಿನಯಿಸಿದ್ದಾರೆ.

ಇವರ ಗುರುಗಳು ಸೂರ್ಯನಾರಾಯಣ ಪದಕಣ್ಣಯ ಬಾಯಾರು, ತಂದೆ ಅರವಿಂದ ಪಂಜಿರಿಕೆ, ತಾಯಿ ಚಂದ್ರಿಕ. ಇವರು ವಿಷ್ಣು, ರತಿ, ಪದ್ಮಗಂಧಿನಿ, ಲಕ್ಷ್ಮಣ, ಅಂಗದ, ಕೃಷ್ಣ, ದೇವೇಂದ್ರ ಇತ್ಯಾದಿ ಪಾತ್ರಗಳನ್ನು ಅಭಿನಯಿಸಿದ್ದಾರೆ. ಅತಿಥಿ ಕಲಾವಿದರೊಂದಿಗೆ ಅತಿಥಿ ಕಲಾವಿದೆಯಾಗಿ ಎಡನೀರು ಪುಂಡೂರು ಜೊಡಾಟ, ಅಖಿಲ ಭಾರತೀಯ ಗಮಕ ಸಾಹಿತ್ಯ ಸಮೇಳನ ಧರ್ಮಸ್ಥಳ, ಎಡನೀರು, ಸುಂಕದ ಕಟ್ಟೆ , ಕಟೀಲು 4ನೇ ಮೇಳದಲ್ಲಿ ಪಾತ್ರ, ಬಲಿಪ ಪ್ರಸಾರ, ಪಟ್ಲ , ಬಳ್ಳ ದುಂಜ ಮುಂತಾದ ಹೆಸರುವಾಸಿ ಭಾಗವತರೊಡನೆ ವೇದಿಕೆಯಲ್ಲಿ ಕಾರ್ಯಕ್ರಮವನ್ನು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಚೈತನ್ಯ ದೇಲಂತ ಮಜಲು ಚೆಂಡೆ ಮದ್ದಳೆ ದಿಗ್ಗಜ 205 ಕೂ ಹೆಚ್ಚು ವೇದೀಕೆಯಲ್ಲಿ ಕಾರ್ಯಕ್ರಮವನ್ನು ನೀಡಿದ್ದಾರೆ. 9ನೇ ವಯಸ್ಸಿನಲ್ಲಿ ಅಟಿಲ್‍ಜಿ ಟ್ರೋಪಿ ಕಬ್ಬಡಿ ಪಂದ್ಯಾಟ ಬಡಿಯಡ್ಕದಲ್ಲಿ ಸನ್ಮಾನ ಕನ್ನಡ ಕೈರಲಿ ಪತ್ರಿಕೆಯ 10ನೇ ವಾರ್ಷಿಕೋತ್ಸವದಲ್ಲಿ ಸಂದರ್ಭದಲ್ಲಿ ಕನ್ನಡ ಪ್ರಾಧಿಕಾರದ ವತಿಯಿಂದ ಡಾ: ಸಿದ್ದರಾಮಯ್ಯ ಸನ್ಮಾನಿಸಿದರು.

ಜಾಹೀರಾತು
ಜಾಹೀರಾತು

ಚಿಕ್ಕ ಪ್ರಾಯದ ಬಾಲೆ ಚತುರೆ ಭವಿಷ್ಯದ ಮಿನುಗು ತಾರೆ ಎಂದು ಎಡನೀರು ಶ್ರೀಗಳು ಆಶೀರ್ವಾದಿಸಿದ್ದಾರೆ. ಇವರಿಗೆ ಹೊಸ ದಿಗಂತ-ಉದಯವಾಣಿ ಪ್ರತಿಕೆಯಲ್ಲಿ “ಕಲಾ ಮಾತೆಯ ಮಡಿಲಿಗೆ ಯಕ್ಷಕುಸುಮ ಉಪಾಸನ ಪಂಜರಿಕೆ” ಎಂದು ಹೆಸರು ಪಡೆದುಕೊಂಡಿದ್ದಾರೆ, ಹತ್ತು ಹಲವಾರು ವೇದಿಕೆಗಳಲ್ಲಿ ಸಂಗಿತ ಪ್ರದರ್ಶನ ನೀಡಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈಕೆ ಶ್ರೀ ಭಾರತಿ ವಿದ್ಯಾಪೀಠ ಬಡಿಯಾಡ್ಕದಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದು. ಇಷ್ಟೆಲ್ಲ ಸಾಧನೆ ಮಾಡಿರುವ ಈ ಪುಟ್ಟ ಹುಡುಗಿಯ ಪ್ರತಿಭೆಯು ಲೋಕಮುಖಕ್ಕೆ ಅನಾವರಣಗೊಳ್ಳಲಿ ನಿಮ್ಮ ಪ್ರೋತ್ಸಾಹವೂ ಇರಲಿ.