
ಮರಾಟಿ ಭಾಷೆ ಮಹಾರಾಷ್ಟ್ರ ಎಂಬ ದೇಶವಾಚಕದಿಂದ ಹುಟ್ಟಿದಂತಹ ಭಾಷವಾಚಕ ಪದವಾಗಿರುತ್ತದೆ ಎಂಬ ವೇದ ವಾಕ್ಯದೊಂದಿಗೆ ರಾಜ್ಯದ ಎಲ್ಲಾ ಹೆಚ್ಚಿನ ಜನರು ಉದ್ಯೋಗ ಹುಡುಕಿಕೊಂಡು ಬರುವುದು ನಮ್ಮ ರಾಜಧಾನಿ ಬೆಂಗಳೂರಿಗೆ, ಸುಮಾರು 600 ವರ್ಷಗಳ ಹಿಂದೆ ಮಹಾರಾಷ್ಟ್ರದಿಂದ ಬಂದು ಕರ್ನಾಟಕ ಮತ್ತು ಕೇರಳ ಕರಾವಳಿ ಪ್ರದೇಶಗಳಲ್ಲಿ ಶಾಶ್ವತವಾಗಿ ನೆಲೆಸಿ, ತನ್ನ ವಿದ್ಯಾಭ್ಯಾಸದ ಆಧಾರ ಮೇಲೆ, ತಮಗೆ ಸಿಕ್ಕ ಮಿಸಲಾತಿಯಿಂದ ದೊರೆತ ಸರ್ಕಾರಿ ಉದ್ಯೋಗ ಮತ್ತು ಅದಲ್ಲದೇ ಖಾಸಗಿ ಉದ್ಯೋಗಗೋಸ್ಕರ ರಾಜ್ಯದ ರಾಜಧಾನಿಗೆ ಬಂದು ಕೆಲವು ಶಾಶ್ವತವಾಗಿ ಮತ್ತು ಇನ್ನೂ ಕೆಲವರು ತಾತ್ಕಾಲಿಕವಾಗಿ ನೆಲೆಸಲು ಪ್ರಾರಂಭಿಸಿದರು.
ದ.ಕ ಉಡುಪಿ, ಚಿಕ್ಕಮಂಗಳೂರು, ಮಡಿಕೇರಿ, ಕಾಸರಗೋಡು ಜಿಲ್ಲೆಯಲ್ಲಿ ಮರಾಟಿಗರ ಅಭಿವೃದ್ಧಿಗೆ ದುಡಿಯುವಂತಹ ನೂರಾರು ಸಮಿತಿಗಳಿವೆ ಆದರೆ ಕರ್ನಾಟಕ ಮರಾಟಿ ಸಂಘದಲ್ಲಿ ಎಲ್ಲಾ ಜಿಲ್ಲೆಯ ಸಮುದಾಯದದವರು ಒಂದೇ ವೇದಿಕೆಯ ಅಡಿಯಲ್ಲಿ ಇರುವುದು ತನ್ನ ಒಗ್ಗಟ್ಟನ್ನು ಬಲಪಡಿಸುವುದರ ಸಾಕ್ಷಿ ಯಾಗಿದೆ.
ಎಲ್ಲಾ ಮರಾಟಿ ನಾಯ್ಕರ ಒಗ್ಗಟ್ಟಿನ ಶ್ರಮದಿಂದ 30 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕರ್ನಾಟಕ ಮರಾಟಿ ಸಂಘ (ರಿ) ಹುಟ್ಟಿಕೊಂಡಿತು, ತನ್ನದೆ ಆದ ಸಿದ್ಧಾಂತದೊಂದಿಗೆ ರಾಜ್ಯದ ಮರಾಟಿ ಒಳಿತಿಗಾಗಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಮಾತೃ ಸಂಘ ಬೆಳ್ಳಿಹಬ್ಬ ಆಚರಿಸಿಕೊಂಡಿರುವುದು ಇತಿಹಾಸ. ಇದಕ್ಕೆ ಅಷ್ಟೇ ಸಹಕಾರದಿಂದ ಹುಟ್ಟಿಕೊಂಡ ವೇದಿಕೆಗಳೆ ಕರ್ನಾಟಕ ಮರಾಟಿ ಯುವ ವೇದಿಕೆ ಮತ್ತು ಕರ್ನಾಟಕ ಮರಾಟಿ ಮಹಿಳಾ ವೇದಿಕೆ. ಇವು ಕೂಡ ರಾಜ್ಯದಲ್ಲಿ ಉತ್ತಮ ಕಾರ್ಯಕ್ರಮಗಳೊಂದಿಗೆ ಸಾಥ್ ಕೊಡುತ್ತಿದೆ. ಕರ್ನಾಟಕ ಮರಾಟಿ ಯುವ ವೇದಿಕೆಯು ಬಹಳ ಅದ್ದೂರಿಯಾಗಿ ತನ್ನ ದಶಮಾನೋತ್ಸವನ್ನು ಆಚರಿಸಿಕೊಂಡಿದೆ. ಆದರೆ ಇದೀಗಾ ಕರ್ನಾಟಕ ಮರಾಟಿ ಮಹಿಳಾ ವೇದಿಕೆ ಗೆ 10 ವರ್ಷಗಳ ಸಂಭ್ರಮ.
ಜೂನ್ 2-2019 ಬೆಂಗಳೂರಿನ A.D.A ಕಲಾ ಮಂದಿರದಲ್ಲಿ ದಶಮಾನೋತ್ಸವ ಸಂಭ್ರಮ ನಡೆಯಲಿದೆ. ನಾವೆಲ್ಲರೂ ಪಾಲ್ಗೊಂಡು ನಮ್ಮ ಸಮುದಾಯದ ಆಚರಣೆಯನ್ನು ಸಂಭ್ರಮಿಸೋಣ. ಎಲ್ಲಾ ಮರಾಟಿಗರಿಗೆ ದಶಮಾನೋತ್ಸಕ್ಕೆ ಶುಭಕೊರುವ ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ (ರಿ) ದಕ್ಷಿಣ ಕನ್ನಡ.













