ಆರೋಪಿಯನ್ನು ಹಿಡಿಯಲು ಹೊರಟ್ಟಿದ್ದ ಪೊಲೀಸ್ ಜೀಪ್ಗೆ ಸೂಟ್ಕರ್ ಡಿಕ್ಕಿ : ಮಹಿಳೆ ಸ್ಥಳದಲ್ಲಿಯೇ ಸಾವು – ಕಹಳೆ ನ್ಯೂಸ್

ಹಾವೇರಿ: ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹಿಡಿಯಲು ಹೊರಟ್ಟಿದ್ದ ಪೊಲೀಸ್ ಜೀಪ್ಗೆ ಸೂಟ್ಕರ್ ಡಿಕ್ಕಿಯಾದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ರಾಣಿಬೆನ್ನೂರು ಮಾಗೋಡ ರಸ್ತೆಯಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಕನೂರ ಗ್ರಾಮದ ಸವಿತಾ ಶಶಿಮಠ (24) ಮೃತ ದುರ್ದೈವಿ. ರಾಣಿ ಬೆನ್ನೂರು ಗ್ರಾಮೀಣ ಠಾಣೆ ಪಿಎಸ್ಐ ಸುನೀಲ್ ಕುಮಾರ ಪ್ರಯಾಣಿಸುತ್ತಿದ್ದ ಜೀಪ್ಗೆ ಸ್ಕೂಟರ್ ಡಿಕ್ಕಿಯಾಗಿದೆ. ಈ ಘಟನೆಯಲ್ಲಿ ಸ್ಕೂಟರ್ ಹಿಂಬದಿಯಲ್ಲಿ ಕುಳಿತಿದ್ದ ಕವಿತಾ ಕೊದಾರಿ (27) ಅವರು ಗಾಯಗೊಂಡಿದ್ದಾರೆ. ಗಾಯಾಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.








