
ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಕುಕ್ಕಾಜೆ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಶಾದಿಮಹಲ್ ನಿರ್ಮಾಣಕ್ಕೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವತಿಯಿಂದ 50 ಲಕ್ಷ ರೂಪಾಯಿ ಹಣ ಬಿಡುಗಡೆಗೊಂಡಿರುವುದರ ಪೈಕಿ 25 ಲಕ್ಷ ರೂಪಾಯಿ ಹಣವನ್ನು ಮಸೀದಿಯ ಹಳೆಯ ಕಮಿಟಿಯ ಸದಸ್ಯರಾದ ಇಸ್ಮಾಯಿಲ್, ಮಹಮ್ಮದ್ ರಫೀಕ್ ಹಾಗೂ ಪಿ.ಕೆ ಹಸೈನಾರ್‍ರವರು ದ.ಕ ಜಿಲ್ಲಾ ಪಂಚಾಯತ್ ಸಹಾಯಕ ಅಭಿಯಂತರರ ಸೀಲು ಹಾಗೂ ಸಹಿಯನ್ನು ನಕಲಿಯಾಗಿ ಸೃಷ್ಟಿಸಿ ಪೋರ್ಜರಿ ದಾಖಲೆಗಳನ್ನು ಸಲ್ಲಿಸಿ ಹಣವನ್ನು ಬಿಡುಗಡೆಗೊಳಿಸಿ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಮಸೀದಿ ಸದಸ್ಯರಾದ ಅಬ್ದುಲ್ ರಜಾಕ್ ಇರಾರವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಆ.ಕ್ರ 56/19 ಕಲಂ 417,468,420 ಜೊತೆಗೆ 34 ಭಾ.ದಂ.ಸಂ ನಂತೆ ಪ್ರಕರಣ ತನಿಖೆಯಲ್ಲಿರುತ್ತದೆ.















