
ಕೋಲ್ಕತ್ತ: ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯ ಆಪ್ತ, ಮಾಜಿ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ದೇಶ ಬಿಟ್ಟು ತೆರಳದಂತೆ ನಿನ್ನೆ ಸಿಬಿಐ ಏರ್‍ಪೋರ್ಟ್ ಅಧಿಕಾರಿಗಳಿಗೆ ನೋಟಿಸ್ ನೀಡಿತ್ತು. ಈಗ ಇದರ ಬೆನ್ನಲ್ಲೆ ಇಂದು ರಾಜೀವ್ ಕುಮಾರ್‌ರನ್ನ ಸಿಬಿಐ ತಂಡ ಬಂಧಿಸಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಿದೆ ಎನ್ನಲಾಗಿದೆ. ರಾಜೀವ್ 1989ರ ಐಪಿಎಸ್ ಬ್ಯಾಚ್‍ನ ಅಧಿಕಾರಿಯಾಗಿದ್ದು, ಪೋಂಜಿ ಸ್ಕ್ಯಾಮ್‍ನಲ್ಲಿಯೂ ಪ್ರಮುಖ ಆರೋಪಿ ಅಂತ ಹೆಸರು ಕೇಳಿ ಬಂದಿದೆ. ಶಾರದಾ ಚಿಟ್ ಫಂಡ್ ಕೇಸ್‍ಗೆ ಸಂಬಂಧಿಸಿದಂತೆ ಪ್ರಮುಖ ದಾಖಲೆ ನಾಶಪಡಿಸಿದ ಆರೋಪ ರಾಜೀವ್ ಅವರ ಮೇಲಿದೆ. ಈ ಕುರಿತು ತನಿಖೆಗೆಂದು ಇದೇ ಫೆಬ್ರವರಿಯಲ್ಲಿ ರಾಜೀವ್ ಮನೆಗೆ ಸಿಬಿಐ ತಂಡ ತೆರಳಿತ್ತು. ಈ ವೇಳೆ ಸಿಎಂ ದೀದಿ, ಧರಣಿ ಮಾಡಿ ತನಿಖೆಗೆ ಅಡ್ಡಿ ಪಡಿಸಿ, ಇದು ‘ಸಾಂವಿಧಾನಿಕ ನಿಯಮಗಳ ಮೇಲೆ ದಾಳಿ’ ಎಂದು ಕರೆದಿದ್ದರು.















