
ಪುತ್ತೂರು: ನಗರದ ಕುಂಬ್ರ ಎಂಬಲ್ಲಿನ ಸೇತುವೆಯ ಬಳಿ ಬಿಜೆಪಿ ಯುವ ಮೋರ್ಛಾದ ಅಧ್ಯಕ್ಷರ ಕಾರಿಗೆ ಬೆಂಗಳೂರು ಮೂಲದ ಕಾರೊಂದು ಡಿಕ್ಕಿಯಾಗಿ ಪರಾರಿಯಾದ ಘಟನೆ ನಡೆದಿದೆ. ಯುವಮೋರ್ಛಾದ ಅಧ್ಯಕ್ಷ ಅನೀಶ್ ಬಡೆಕ್ಕಿಲ ಅವರ ಫೋರ್ಡ್‍ಪಿಗೋ ಕಾರಿಗೆ ಬೆಂಗಳೂರು ನಂಬರ್ ಪ್ಲೇಟ್‍ನ ( ಕೆ.ಎ. 04 ಎಂಎಲ್ 2417) ಮಹೀಂದ್ರ ಝೈಲೋ ಕಾರು ಹಿಂದಿನಿಂದ ಡಿಕ್ಕಿಯಾಗಿ ಪರಾರಿಯಾಗಿದೆ. ಸುಳ್ಯದಿಂದ ಮನೆಗೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದು ಕಾರಿನಲ್ಲಿದ್ದ ಅನೀಶ್ ಮತ್ತು ಅವರ ಪತ್ನಿ ಅನಘಾಗೆ ಯಾವುದೇ ತೊಂದರೆಯಾಗಿಲ್ಲ. ಡಿಕ್ಕಿಯಾದ ರಭಸಕ್ಕೆ ಪಿಗೋ ಕಾರಿಗೆ ಹಾನಿ ಉಂಟಾಗಿದೆ. ಈ ಘಟನೆಗೆ ಸಂಬಂಧಿಸುದಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















