Thursday, March 19, 2026
ಸುದ್ದಿ

ಹೆಣ್ಮಕ್ಕಳನ್ನ ಬ್ಲಾಕ್ ಮೇಲ್ ಮಾಡುತ್ತಿದ್ದ ಕಾಮುಕನ ಮೇಲೆ ಕೇಸ್ ದಾಖಲು – ಕಹಳೆ ನ್ಯೂಸ್

ಹೆಬ್ರಿಯ ಗೇರು ಬೀಜ ಕಾರ್ಖನೆಯಲ್ಲಿ ಕೆಲಸ ಮಾಡುತ್ತಿರುವ ಮ್ಯಾನೇಜರ್ ಒಬ್ಬ ತನ್ನ ಕಾರ್ಖನೆಯಲ್ಲಿರುವ ಟಾಯ್ಲೆಟ್‍ನಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟು, ಯುವತಿಯರು ಬಟ್ಟೆ ಬದಲಾಯಿಸುವಾಗ ಅವರ ಅರೆ ನಗ್ನ ಫೋಟೊಗಳನ್ನ ತೆಗದು, ಬ್ಲಾಕ್ ಮೇಲ್ ಮಾಡುತ್ತಿದ್ದ ಘಟನೆ ವರದಿಯಾಗಿದೆ. ಪುಷ್ಪ ರಾಜ್ ಎಂಬ ಕಾಮುಕ ಈ ಕೃತ್ಯ ನಡೆಸುತ್ತಿದ್ದು ಈತನ ಮೇಲೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹೆಬ್ರಿಯ ವಿನಾಯಕ ಗೇರು ಬೀಜ ಫ್ಯಾಕ್ಟರಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಪುಷ್ಪರಾಜ ಕಳೆದ ಎರಡು ವರುಷಗಳ ಹಿಂದೆ ಆತ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯಲ್ಲಿ ಯುವತಿಯೋರ್ವಳ ಫೋಟೊ ಹಾಗೂ ವಿಡಿಯೋ ಅವಳ ಅರಿವಿಲ್ಲದೇ ತೆಗೆದಿದ್ದ. ನಂತರ ಆಕೆಗೆ ಈ ಫೋಟೊಗಳನ್ನ ತೋರಿಸಿ ತನ್ನ ಜೊತೆ ವಾಟ್ಸ್ ಅಪ್‍ನಲ್ಲಿ ಪ್ರತಿದಿನ ಚಾಟ್ ಮಾಡುವಂತೆಯೂ ಒತ್ತಾಯಿಸುತ್ತಿದ್ದ. ಮರ್ಯಾದೆಗೆ ಅಂಜಿ ಆ ಯುವತಿ ಈತನೊಂದಿಗೆ ಅನಿವಾರ್ಯವಾಗಿ ಚಾಟ್ ಮಾಡುತ್ತಿದ್ದಳು. ತದ ನಂತರ ಈತ ಯುವತಿಗೆ ಮಾನಸಿಕವಾಗಿ ಕಿರುಕುಳ ನೀಡುವುದರ ಜೊತೆಗೆ ತನ್ನೊಂದಿಗೆ ಬರುವಂತೆಯೂ ಒತ್ತಾಯಿಸತೊಡಗಿದ್ದ. ಈ ಸಂದರ್ಭದಲ್ಲಿ ಈ ಬಗ್ಗೆ ಯುವತಿಯ ಕುಟುಂಬಸ್ಥರಿಗೆ ತಿಳಿದು ಅತನನ್ನ ಕರೆಸಿ ಬುದ್ಧಿವಾದವನ್ನು ಕೂಡ ಹೇಳಿದ್ದರು. ಅಷ್ಟೇ ಅಲ್ಲ ಮದುವೆಯಾಗುವುದಾದ್ರೆ ಈ ಯುವತಿಯನ್ನ ಮದುವೆಯಾಗಲು ಹೇಳಿದ್ದರು. ಅದರೆ ಈ ಒಪ್ಪಂದಕ್ಕೆ ಒಪ್ಪದ ಪುಪ್ಪರಾಜ್ ಇನ್ನು ಮುಂದೆ ಹುಡುಗಿ ತಂಟೆಗೆ ಬರಲ್ಲ ಎಂದು ಫೋಟೊಗಳನ್ನ ಡಿಲೀಟ್ ಮಾಡುವುದಾಗಿ ಮಾತು ಕೊಟ್ಟಿದ್ದ.

ಜಾಹೀರಾತು
ಜಾಹೀರಾತು

ಯುವತಿಗೆ ಕುಟುಂಬಸ್ಥರು ಬೇರೊಂದು ಯುವಕನೊಂದಿಗೆ ವಿವಾಹ ನಿಶ್ಚಯವನ್ನು ಮಾಡಿ ಮದುವೆ ದಿನ ಕೂಡ ಗೊತ್ತು ಮಾಡಿದ್ದರು. ಎಲ್ಲವೂ ಸರಿ ಹೋಯ್ತು ಅಂದಾಗಲೇ ಕಾಮುಕ ಪುಷ್ಪರಾಜ ಮತ್ತೆ ತನ್ನ ಅಸಲಿ ಬುದ್ದಿ ತೋರಿಸಿದ್ದಾನೆ. ಯುವತಿಯನ್ನ ಮದುವೆಯಾಗುವ ಯುವಕನಿಗೆ ಫೇಸ್‍ಬುಕ್‍ನಲ್ಲಿ ಪರಿಚಯ ಮಾಡಿಕೊಂಡು ಅತನೊಂದಿಗೆ ಫ್ರೆಂಡ್ ಶಿಪ್ ಕೂಡ ಮಾಡಿಕೊಂಡು, ನಂತರ ಯುವತಿಗೆ ಕರೆ ಮಾಡಿ ನೀನು ಮದುವೆಯಾಗೋ ಯುವಕ ನನ್ನೊಂದಿಗೆ ಸಲಿಗೆಯಿಂದಿದ್ದಾನೆ. ನಿನ್ನ ಫೋಟೋಗಳನ್ನ ಅವನಿಗೆ ತೋರಿಸ್ತೇನೆ ಅಂತಾ ಬ್ಲಾಕ್ ಮೈಲ್ ಮಾಡತೊಡಗಿದ್ದಾನೆ. ಇದರಿಂದ ಹೆದರಿದ ಯುವತಿ ತನ್ನನ್ನು ತನ್ನ ಪಾಡಿಗೆ ಬಿಟ್ಟು ಬಿಡುವಂತೆ ಕಾಲು ಹಿಡಿದಿದ್ದಾಳೆ.

ಇದಕ್ಕೆ ಆತ ಮೂರು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಮಾನ ಮಾರ್ಯದೆ ಹಾಗೂ ಭವಿಷ್ಯದ ದೃಷ್ಟಿಯಿಂದ ಯುವತಿಯ ಕುಟುಂಬಸ್ಥರು ಧರ್ಮಸ್ಥಳ ಸಂಘಗಳಿಂದ ಸಾಲಮಾಡಿ ಮೂರು ಲಕ್ಷ ರೂಪಾಯಿಗಳನ್ನ ಆತನಿಗೆ ಕೊಟ್ಟು ಫೋಟೋ ಹಾಗೂ ವಿಡಿಯೋವನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಾರೆ. ಅದ್ರೆ ಹಣ ಪಡೆದುಕೊಂಡ ನಂತರ ಕಾಮಿ ರಾಜ ಯುವತಿಯನ್ನ ಮದುವೆಯಾಗೋ ಯುವಕನಿಗೆ ಫೋಟೊಗಳಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಆಕೆಯನ್ನ ಮದುವೆಯಾದ್ರೆ ಮುಂದೆ ನಾನು ನಿಮಗೆ ತೊಂದರೆ ಕೊಡುತ್ತೇನೆಂದು ಬೆದರಿಸಿದ್ದಾನೆ. ಈತನ ಈ ಕೃತ್ಯದಿಂದ ನಿಶ್ಚಯವಾಗಿದ್ದ ಬಡ ಯುವತಿಯ ಮದುವೆ ನಿಂತು ಹೋಗಿದೆ. ಮದುವೆಗಾಗಿ ಎಲ್ಲಾ ತಯಾರಿ ನಡೆದಿದ್ದಾಗಲೇ ಈ ಪುಷ್ಪರಾಜ್ ಎನ್ನುವ ಪಾಪಿ ಯುವತಿ ಬಾಳಿಗೆ ಕೊಳ್ಳಿ ಇಟ್ಟು ಬಿಟ್ಟಿದ್ದಾನೆ.

ಇದರಿಂದ ಮಾನಸಿಕವಾಗಿ ನೊಂದ ಯುವತಿ ಅತ್ಮಹತ್ಯೆ ಮಾಡೋಕೆ ಮುಂದಾಗಿದ್ದಳು. ಕ್ಲಪ್ತ ಸಮಯದಲ್ಲಿ ಆಕೆಯ ಅಣ್ಣಾ ಆಕೆಯನ್ನ ನೇಣಿನಿಂದ ರಕ್ಷಣೆ ಮಾಡಿದ್ದಾನೆ. ಮದುವೆ ಸಂಭ್ರಮದಲ್ಲಿದ್ದ ಮನೆ ಸೂತಕದ ಮನೆಯಂತೆ ಮಾಡಿಬಿಟ್ಟಿದ್ದ ಈ ಕಾಮಿ ಪುಷ್ಪರಾಜ್.

ಇಷ್ಟು ಮಾತ್ರವಲ್ಲದೇ ಮತ್ತೆ ಕರೆ ಮಾಡಿ ನೀನು ಮುಂದೆ ಯಾರನ್ನೂ ಮದುವೆಯಾಗುವ ಹಾಗಿಲ್ಲ. ನಾನು ಕರೆದಲ್ಲಿಗೆ ಬರಬೇಕು ಅಂದಿದ್ದಾನೆ. ಜೊತೆಗೆ ಕುಟುಂಬಸ್ಥರಿಗೂ ಜೀವ ಬೆದರಿಕೆ ಹಾಕಿದ್ದಾನೆ.

ಸ್ಥಳೀಯರು ಯುವತಿಯ ಸಂಕಷ್ಟವನ್ನು ಕಂಡು ಮರುಕ ಪಟ್ಟು ಪುಷ್ಪರಾಜ್‍ಗೆ ಬುದ್ದಿ ಕಲಿಸಲು ಮುಂದಾಗಿದ್ದಾರೆ. ಇದೀಗ ಯುವತಿ ಸ್ಥಳೀಯರ ಸಹಾಯದಿಂದ ಪಾಪಿ ಪುಷ್ಪರಾಜನ ವಿರುದ್ದ ಬ್ಲಾಕ್ ಮೈಲ್ ಆರೋಪದಡಿಯಲ್ಲಿ ಹೆಬ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಚಾರ ಪಂಚಾಯಿತಿ ಸದಸ್ಯೆಯ ಪುತ್ರನಾಗಿರುವ ಈತನಿಗೆ ರಾಜಕೀಯ ನಾಯಕರ ಹಾಗೂ ಸ್ಥಳೀಯ ಪ್ರಭಾವಿ ವ್ಯಕ್ತಿಗಳ ಬೆಂಬಲವೂ ಇದೆ.! ದೂರು ದಾಖಲಾಗುವ ಅರಿವು ಸಿಗುತ್ತಿದ್ದಂತೆ ತನ್ನ ರಾಜಕೀಯ ಪುಡಾರಿಗಳ ಬೆಂಬಲದೊಂದಿಗೆ ಪೊಲೀಸರಿಗೆ ಒತ್ತಡ ಹಾಕುವ ಕೆಲಸಕ್ಕೂ ಕೈ ಹಾಕಿದ್ದಾನೆ. ಅದ್ರೆ ಹೆಣ್ಣುಮಗಳೊಬ್ಬಳ ಕೇಸ್ ಅಗಿರುವುದರಿಂದ ಪೊಲೀಸರು ಯಾವುದೇ ಒತ್ತಡಗಳಿಗೆ ಮಣಿಯದೇ ಕೇಸು ದಾಖಲಿಸಿಕೊಂಡಿದ್ದಾರೆ. ಹೀಗಾಗಿ ಫ್ಯಾಕ್ಟರಿಯಲ್ಲಿದ್ದ ಪುಷ್ಪರಾಜ್ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾನೆ. ಪೊಲೀಸರು ಕಾಮಿ ಪುಷ್ಪರಾಜನ ಹುಡುಕಾಟದಲ್ಲಿದ್ದಾರೆ.

ಹೆಣ್ಮಕ್ಕಳನ್ನ ಬ್ಲಾಕ್ ಮೇಲ್ ವಶೀಕರಣವೇ ಈತನ ಧಂಧೆ. ?
ಈ ಕಾಮಿ ಪುಷ್ಪರಾಜನ ಮೇಲೆ ಹಲವು ದೂರುಗಳು ಈ ಹಿಂದಿನಿಂದಲೂ ಕೇಳಿ ಬಂದಿದೆ. ವಿದ್ಯಾವಂತನಾಗಿರುವ ಪುಷ್ಪರಾಜ್ ಮಾತಿನ ಮೋಡಿಗಾರ. ಫ್ಯಾಕ್ಟರಿಗೆ ಬರುವ ಹೆಣ್ಣು ಮಕ್ಕಳನ್ನ ಮಾತುಗಳಿಂದಲೇ ಮೋಡಿ ಮಾಡಿ ಮರಳು ಮಾಡುತ್ತಾನೆ. ಫ್ಯಾಕ್ಟರಿಯಲ್ಲಿ ಬಟ್ಟೆ ಬದಲಾಯಿಸುವ ಜಾಗಗಳಲ್ಲಿ ಮೊಬೈಲ್ ಫೋನ್ ಇಟ್ಟು ಹಲವು ಮಂದಿಯನ್ನ ಇದೇ ತರಹ ಬ್ಲಾಕ್ ಮೈಲ್ ಮಾಡಿರುವ ಆರೋಪಗಳಿವೆ. ಈತನಿಗೆ ಇದೇ ಕೆಲಸ ಮಾಡಲು ಈತನದ್ದೇ ಒಂದು ಯುವಕರ ಪಡೆ ಇದ್ದು, ಅವರ ಸಹಕಾರದಿಂದ ಇದನ್ನ ಮಾಡುತ್ತಿದ್ದ ಅನ್ನೋದು ಸ್ಥಳೀಯರ ಆರೋಪವಾಗಿದೆ.

ಹಲವು ಯುವತಿಯರೊಂದಿಗೆ ಸಂಪರ್ಕ ಹೊಂದಿರುವ ಈತ ಬ್ಲಾಕ್ ಮೇಲ್‍ನಿಂದಲೇ ಹಣ ಸಂಪಾದಸಿದ್ದಾನಂತೆ. ಇದೀಗ ಹೆಬ್ರಿ ಠಾಣೆಯಲ್ಲಿ ಈತನ ವಿರುದ್ದ ಪ್ರಕರಣ ದಾಖಲಾಗಿದ್ದು ಪೊಲೀಸರ ಲಾಠಿ ಏಟಿನಿಂದ ಇನ್ನಷ್ಟು ಸತ್ಯಗಳು ಹೊರ ಬರಬೇಕಾಗಿದೆ. ಇದೇ ರೀತಿ ಇನ್ನಷ್ಟು ಹೆಣ್ಣು ಮಕ್ಕಳಿಗೆ ಮಾಡಿದ್ದನೆಂಬುವುದು ಬೆಳಕಿಗೆ ಬರಬೇಕಾಗಿದೆ. ಪೋಲಿಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.