
ದೇಶದಲ್ಲಿ ತಲೆ ಮರೆಸಿಕೊಂಡಿರುವ ಭೂಗತ ದೊರೆ ದಾವೂದ್ ಇಬ್ರಾಹಿಂಗೆ ನೇಪಾಳ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಭಾರತದ ಫೇಕ್ ನೋಟ್‍ಗಳನ್ನ ಸಾಗಿಸುತ್ತಿದ್ದ ದಾವೂದ್ ಇಬ್ರಾಹಿಂನ ಸಹಾಯಕ, ಆಪ್ತ, ಯುನುಸ್ ಮಿಯಾ ಅನ್ಸಾರಿ ಸೇರಿ ಐವರು ಆರೋಪಿಗಳನ್ನ ನೇಪಾಳ ಪೊಲೀಸರು ತ್ರಿಭುವನ್ ಇಂಟರ್ ನ್ಯಾಷನಲ್ ಏರ್‍ಪೋರ್ಟ್‍ನಲ್ಲಿ ಅರೆಸ್ಟ್ ಮಾಡಿದ್ದಾರೆ.
ಯುನುಸ್ ಮಿಯಾ ಅನ್ಸಾರಿ ಹಾಗೂ ಪಾಕಿಸ್ತಾನದ ಮೂವರು, ನೇಪಾಳದ ಇಬ್ಬರು ಆರೋಪಿಗಳು ಭಾರತದ 2000 ರೂಪಾಯಿ ಮುಖಬೆಲೆ ನಕಲಿ ನೋಟುಗಳನ್ನ ಕತಾರ್‌ದಿಂದ ನೇಪಾಳಕ್ಕೆ ತಂದಿದ್ದರು. ಆದ್ರೆ, ಆರೋಪಿಗಳ ಬಳಿ ಇದ್ದ ಪಾಸ್‍ಪೋರ್ಟ್ ಪಾಕಿಸ್ತಾನದಿಂದ ಬಂದವರೆಂದು ತೋರಿಸುತ್ತಿತ್ತು.
ಇದರ ಆಧಾರದ ಮೇಲೆ ವಿಚಾರಣೆ ನಡೆಸಿದ ಪೊಲೀಸರು ಯುನುಸ್ ಅನ್ಸಾರಿ ಅಕ್ರಮವಾಗಿ ನೇಪಾಳದಲ್ಲಿ ISI ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದ ಅನ್ನೋದು ತಿಳಿದು ಬಂದಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ISI ಆದೇಶದ ಮೇರೆಗೆ ಭಾರತದಲ್ಲಿ ಫೇಕ್ ನೋಟ್‍ಗಳನ್ನ ಚಲಾವಣೆ ಮಾಡಲು ಪ್ಲಾನ್‍ಮಾಡಿದ್ದ ಅನ್ನೋದು ತನಿಖೆ ವೇಳೆ ಗೊತ್ತಾಗಿದೆ. ಯುನುಸ್ ಅನ್ಸಾರಿ ನೇಪಾಳದ ಮಾಜಿ ಸಚಿವ ಸಲೀಮ್ ಅನ್ಸಾರಿ ಅವರ ಮಗ. ಆದ್ರೆ, ದಾವೂದ್ ಇಬ್ರಾಹಿಂನ ಡಿ-ಕಂಪನಿ ಜೊತೆ ಸಂಪರ್ಕ ಹೊಂದಿದ್ದ ಮತ್ತು ದಾವೂದ್‍ನ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ.















