Friday, March 20, 2026
ಸುದ್ದಿ

ಹೈಕೋರ್ಟ್ ಆದೇಶದಂತೆ ಪಾಕ್ ಪ್ರಜೆಗಳು ವಾಪಸ್ – ಕಹಳೆ ನ್ಯೂಸ್

ಬೆಂಗಳೂರು: ಹೈಕೋರ್ಟ್‍ನ ಆದೇಶದಂತೆ ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದ ಪಾಕಿಸ್ತಾನಿ ಪ್ರಜೆಗಳನ್ನ ಕುಮಾರಸ್ವಾಮಿ ಲೇಔಟ್ ಪೊಲೀಸರು ಸೇಫ್ ಆಗಿ ಪಾಕಿಸ್ಥಾನಕ್ಕೆ ತಲುಪಿಸಿದ್ದಾರೆ. ಶಂಶುದ್ದೀನ್ ಹಾಗೂ ಕಿರಣ್ ಗುಲಮ್ ಅಕ್ರಮವಾಗಿ ಪಾಕಿಸ್ತಾನದಿಂದ ನೇಪಾಳ, ಅಲ್ಲಿಂದ ಭಾರತಕ್ಕೆ ಬಂದು ಕೊನೆಗೆ ನಗರದ ಕುಮಾರಸ್ವಾಮಿ ಲೇಔಟ್‍ನಲ್ಲಿ ವಾಸವಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ, 2017ರ ಮೇ ತಿಂಗಳಲ್ಲಿ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು.

ಈ ಆರೋಪಿಗಳ ವಿರುದ್ಧ 420ಬಿ, 465,468 ಸೆಕ್ಷನ್‍ಗಳು ದಾಖಲಾಗಿದ್ದವು. ಈ ಹಿನ್ನೆಲೆ ಅವರು 2.5 ವರ್ಷ ಜೈಲಿನಲ್ಲಿ ಸಜೆಯನ್ನೂ ಅನುಭವಿಸಿದ್ದರು. ಬಳಿಕ ಹೈಕೋರ್ಟ್, ಅವರನ್ನು ಪಾಕಿಸ್ತಾನಕ್ಕೆ ವಾಪಾಸ್ ಕಳುಹಿಸುವಂತೆ ಆದೇಶಿಸಿತ್ತು. ಹೀಗಾಗಿ ಕುಮಾರಸ್ವಾಮಿ ಲೇಔಟ್ ಇನ್ಸ್ ಪೆಕ್ಟರ್ ನೇತೃತ್ವದಲ್ಲಿ ಅವರನ್ನು ಸೇಫಾಗಿ ವಾಘಾ ಬಾರ್ಡರ್‌ಗೆ ಕಳುಹಿಸಿಕೊಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು