Friday, May 1, 2026
ಸುದ್ದಿ

ಶಿವಮೊಗ್ಗದಿಂದ ನಾಪತ್ತೆಯಾಗಿದ್ದ ಬಾಲಕ ಕಡಬ ಠಾಣಾ ವ್ಯಾಪ್ತಿಯ ಕೆಂಜಾಳದಲ್ಲಿ ಪತ್ತೆ-ಕಹಳೆ ನ್ಯೂಸ್

ಕಡಬ: ಶಿವಮೊಗ್ಗ ಜಿಲ್ಲೆಯ ಸಿಗೆಟ್ಟಿ ನಿವಾಸಿ ಉಮೇಶ್ ಎಂಬವರ ಪುತ್ರ ಅಶ್ವಥ್(12) ಎಂಬಾತ ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಈ ಬಗ್ಗೆ ಶಿವಮೊಗ್ಗ ದೊಡ್ಡ ಪೇಟೆ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು. ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ಬಂದಿದ್ದ ಈತ ಸುಬ್ರಹ್ಮಣ್ಯ ರಸ್ತೆಯ ಕೆಂಜಾಳ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ಕೆಂಜಾಳದ ಹೊಟೇಲ್ ಮಾಲಿಕರೋರ್ವರು ಕಡಬ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಕಡಬ ಪೊಲೀಸರು ಬಾಲಕನನ್ನು ವಿಚಾರಣೆ ನಡೆಸಿದಾಗ ರಜೆಯಲ್ಲಿ ಮನೆಯಿಂದ ಹೊರ ಹೋಗಲು ಬಿಡದ ಕಾರಣ ತಪ್ಪಿಸಿಕೊಂಡು ಬಂದಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಶಿವಮೊಗ್ಗ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು