
ಸುಬ್ರಹ್ಮಣ್ಯ ; ಹೆಸರಾಂತ ಶ್ರೀ ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮೇ 16ರಂದು ಸಿ.ಸಿ.ಕ್ಯಾಮರಾ, ಸಿಬ್ಬಂದಿಗಳ, ಅರ್ಚಕರ ಹಾಗು ಸಿಬ್ಬಂದಿಗಳ ಸಮಯಪ್ರಜ್ಞೆಯಿಂದಾಗಿ ಹುಂಡಿಯಿಂದ ದುಡ್ಡು ಎಬ್ಬಿಸುತ್ತಿದ್ದ ತುಮಕೂರು ಮೂಲದ ತಿಪಟೂರು ಅಶ್ವಿನ್ ಎಂಬಾತನನ್ನು ಬಂಧಿಸಲಾಗಿದ್ದು ದೇವಳದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವಿಂದ್ರ ಅವರು ನೀಡಿದ ದೂರಿನ ಮೇರೆಗೆ ಕುಕ್ಕೇ ಸುಬ್ರಹ್ಮಣ್ಯ ಪೊಲೀಸ್ ಅಧಿಕಾರಿಗಳು ಕಳ್ಳನನ್ನು ಬಂಧಿಸಿ ಸುಳ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.ಕುಕ್ಕೇ ಸುಬ್ರಹ್ಮಣ್ಯ ದೇವಾಲಯ ಸಂಪದ್ಭರಿತವಾಗಿದ್ದರಿಂದ ಕಳ್ಳತನ ನಡೆಯುತ್ತಿರುವುದರಿಂದ ದೇವಾಲಯಕ್ಕೆ ಹೆಚ್ಚಿನ ಬಿಗಿ ಬಂದೋಬಸ್ತ್ ನೀಡಿದ್ದಾರೆ.
















