Tuesday, April 28, 2026
ರಾಜಕೀಯಸುದ್ದಿ

ಜಿಎಸ್​ಟಿ ಹಾಗೂ ನೋಟ್​ಬ್ಯಾನ್ ಮಾಡುವ ಮೊದಲು ಪ್ರಧಾನಿ ಮೋದಿ, ಮನಮೋಹನ್ ಸಿಂಗ್ ಸಲಹೆ ಪಡೆದಿದ್ದರೆ ಅರ್ಥವ್ಯವಸ್ಥೆ ಹಾಳಾಗುತ್ತಿರಲಿಲ್ಲ: ರಾಹುಲ್ ಗಾಂಧಿ – ಕಹಳೆ ನ್ಯೂಸ್

ಚಂಡೀಗಢ: ಜಿಎಸ್​ಟಿ ಹಾಗೂ ನೋಟ್​ಬ್ಯಾನ್ ಮಾಡುವ ಮೊದಲು ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹಾಗೂ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಸಲಹೆ ಪಡೆದುಕೊಂಡಿದ್ದರೆ ಅರ್ಥವ್ಯವಸ್ಥೆ ಹಾಳಾಗುತ್ತಿರಲಿಲ್ಲ ಅಂತಾ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಪಂಜಾಬ್​ನ ಬರ್ಗಾರಿಯಲ್ಲಿ ಕಿಡಿಕಾರಿದ ರಾಹುಲ್ ಗಾಂಧಿ, ಗಬ್ಬರ್​ಸಿಂಗ್​ ಟ್ಯಾಕ್ಸ್​ (ಜಿಎಸ್​ಟಿ) ಹಾಗೂ ನೋಟ್​ಬ್ಯಾನ್​ನಿಂದಾಗಿ ದೇಶದ ಅರ್ಥವ್ಯವಸ್ಥೆ ಹದಗೆಟ್ಟಿದೆ. ನೋಟ್​ಬ್ಯಾನ್​ನಿಂದಾಗಿ ದೇಶದ ಜಿಡಿಪಿ 2% ಕೆಳಗಿಳಿಯುತ್ತೆ ಅಂತಾ ಮನಮೋಹನ್ ಸಿಂಗ್ ಅಂದು ಸರಿಯಾಗಿಯೇ ಭವಿಷ್ಯ ನುಡಿದಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 2014ರ ಚುನಾವಣೆಗೂ ಮೊದಲು ಮನಮೋಹನ್ ಸಿಂಗ್​ ಅವರ ಮೇಲೆ ಮೋದಿ ಜೋಕ್ ಮಾಡುತ್ತಿದ್ದರು. ಈಗ ಮೋದಿ, ಸಿಂಗ್ ಅವರ ಮೇಲೆ ಜೋಕ್ ಮಾಡುತ್ತಿಲ್ಲ. ಯಾಕಂದ್ರೆ ಇಡೀ ದೇಶವೇ ಈಗ ಮೋದಿ ಮೇಲೆ ಜೋಕ್ ಮಾಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು