
ಸುಬ್ರಹ್ಮಣ್ಯ ; ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ನರಸಿಂಹ ದೇವರ ಜಾತ್ರೆ ಸಂಭ್ರಮ ಮನೆ ಮಾಡಿದ್ದು, ಇಂದು ಬೆಳಿಗ್ಗೆ 5 ರಿಂದ ಶ್ರೀ ಸುಬ್ರಮಣ್ಯ ಮಠದಲ್ಲಿ ನರಸಿಂಹ ಹೋಮ ಹಾಗು ಗಣಪತಿ ಹೋಮವು ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜೀಗಳ ದಿವ್ಯ ಉಪಸ್ಥಿಯಲ್ಲಿ ನಡೆಯಿತು.

ಬಾಲಕೃಷ್ಣ ಆಚಾರ್ಯರು ನರಸಿಂಹ ಹಾಗು ಶ್ರೀಕರ ಆಚಾರ್ಯರು ಗಣಹೋಮ ಹೋಮ ನಡೆಸಿಕೊಟ್ಟರು. ಇಂದು ದ್ವಾದಶಿ ಆದ್ದರಿಂದ ಬೆಳಿಗ್ಗೆ ಶ್ರೀ ಮಠದಲ್ಲಿ ಭಗವದ್ಬಕ್ತರಿಗೆ ಅನ್ನದಾನ ನಡೆಯಿತು.

ದಿವಾನರಾದ ಸುದರ್ಶನ ಜೋಯಿಸ್, ವಿದ್ವಾಂಸರು, ಶ್ರೀ ಮಠದ ಸಿಬ್ಬಂದಿಗಳು, ನೂರಾರು ಊರ ಹಾಗು ಪರವೂರ ಭಗವದ್ಬಕ್ತರು ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.









