
ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಸಖತ್ ಸದ್ದು ಮಾಡಿದ್ದ ನಿಖಿಲ್ ಎಲ್ಲಿದಿಯಪ್ಪಾ….. ಡೈಲಾಗ್ ಇದೀಗ ಅರ್ಚಕರ ಬಾಯಲ್ಲಿ ಪ್ರಸ್ತಾಪವಾಗಿದ್ದು ಇದರಿಂದ ಕುಮಾರಸ್ವಾಮಿ ಒಂದು ಕ್ಷಣ ದಂಗಾಗಿದ್ದಾರೆ.
ಹೌದು ಸಿಎಂ ಕುಮಾರ ಸ್ವಾಮಿ ಗಾಣಗಾಪುರದ ದತ್ತಾತ್ರೇಯ ದೇವಾಲಯಕ್ಕೆ ತೆರಳಿದ್ದ ಸಂದರ್ಭದಲ್ಲಿ ದೇವಾಲಯದ ಮುಂದೆ ಪೂಜೆ ಸಲ್ಲಿಸಲು ಕುಳಿತಿದ್ದರು. ಈ ವೇಳೆ ಅರ್ಚಕರು ನಿಖಿಲ್ ಎಲ್ಲಿದ್ದೀಯಾಪ್ಪಾ..? ಎಂದು ಕೇಳಿದಾಗ ಕುಮಾರಸ್ವಾಮಿ ಒಂದು ಕ್ಷಣ ದಂಗಾಗಿದ್ದಾರೆ. ಆ ಬಳಿಕ ಅರ್ಚಕರು ತನ್ನ ಮಗನ ಹೆಸರು ನಿಖಿಲ್ ಎಂದು, ಹಾಗಾಗಿ ಅವನನ್ನು ಕರೆದೆ ಎಂದು ಸ್ಪಷ್ಟನೆ ನೀಡಿದ ಬಳಿಕ ಸಿಎಂ ನಿರಾಳರಾದರು.















