Thursday, March 12, 2026
ಸುದ್ದಿ

ಪುತ್ತೂರಿನ ಬಿಎ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ!- ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ಪ್ರವಾಸೋದ್ಯಮ ವಿಷಯದಲ್ಲಿ ಪದವಿ ಮಾಡುವ ಅವಕಾಶ ಸೃಷ್ಟಿಯಾಗಿದ್ದು, ಪದವಿಯ ಬಿಎ ವಿಭಾಗದಲ್ಲಿ ಪ್ರವಾಸೋದ್ಯಮ ವಿಷಯ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಬಿಎ ವಿಭಾಗದಲ್ಲಿ ಈಗಾಗಲೇ ಪತ್ರಿಕೋದ್ಯಮ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ಐಚ್ಛಿಕ ಕನ್ನಡ ಹಾಗು ಇಂಗ್ಲಿಷ್ ಲಭ್ಯವಿದ್ದು, ಈಗ ಪ್ರವಾಸೋದ್ಯಮ ಸೇರ್ಪಡೆಯಾಗಿ ಹೊಸ ವಿಷಯಗಳಲ್ಲೊಂದಾಗಿದೆ. ಮತ್ತು ಸಾಕಷ್ಟು ಬೇಡಿಕೆಯಿರುವ ಕ್ಷೇತ್ರವಾಗಿ ಮೂಡಿ ಬರುತ್ತಿದೆ. ಸರಕಾರದ ಪ್ರವಾಸೋದ್ಯಮ ಇಲಾಖೆ, ಇತಿಹಾಸ ಮತ್ತು ಪುರಾತತ್ವ ಇಲಾಖೆಗಳಲ್ಲಿ ಈ ವಿಷಯ ಅಧ್ಯಯನ ಮಾಡಿದವರಿಗೆ, ಅಪಾರ ಅವಕಾಶಗಳು ಪ್ರಸ್ತಾಪವಾಗುತ್ತಿವೆ. ಇದರೊಂದಿಗೆ ಖಾಸಗಿ ಪ್ರವಾಸಿ ಮಾರ್ಗದರ್ಶಕರಗಿ ಸ್ವಂತ ಉದ್ಯೋಗ ನಡೆಸುವುದಕ್ಕೂ ಈ ಕೋರ್ಸ್ ಸಹಕಾರಿ.

ಜಾಹೀರಾತು
ಜಾಹೀರಾತು

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರವಾಸೋದ್ಯಮ ಏಜೆನ್ಸಿಗಳಲ್ಲಿ ಉದ್ಯೋಗಿಗಳಾಗಿ ಕಾರ್ಯನಿರ್ವಹಿಸುವುದಕ್ಕೂ ಪ್ರವಾಸೋದ್ಯಮದ ಓದು ಅನಿವಾರ್ಯ. ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ನೂರಕ್ಕು ಹೆಚ್ಚು ಪದವಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರವಾಸೋದ್ಯಮವನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವ ಕಾಲೇಜುಗಳು ಬೆರಳೆಣಿಕೆಯಲ್ಲಿವೆ. ಪುತ್ತೂರಿನಲ್ಲಿ ಈ ಅಧ್ಯಯನ ವಿಷಯ ಇಲ್ಲದೇ ಇರುವ ಕಾರಣ ವಿವೇಕಾನಂದ ಕಾಲೇಜಿನಲ್ಲಿ ಆರಂಭಿಸಬೇಕೆಂಬ ಆಗ್ರಹ ಶಿಕ್ಷಣ ವಲಯದಿಂದ ಕೇಳಿ ಬಂದಿತ್ತು. ಹಾಗಾಗಿ ಈಗ ಬಿಎ ಪದವಿಯಲ್ಲಿ ಪ್ರವಾಸೋದ್ಯಮ ವಿಷಯವನ್ನು ಜೋಡಿಸಿದೆ ವಿವೇಕಾನಂದ ಕಾಲೇಜು.