
ಕೋಸ್ಟಲ್‍ವುಡ್ ಕಲಾವಿದರು ಮತ್ತು ತಂತ್ರಜ್ಞರ ತಂಡದ ಆಶ್ರಯದಲ್ಲಿ ಇಂದಿನಿಂದ 12ವರೆಗೆ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ‘ಸಿಪಿಎಲ್ ಕ್ರಿಕೆಟ್ ಪಂದ್ಯಾಟ’ ಆಯೋಜಿಸಲಾಗಿದೆ. ಈ ಬಾರಿ ಮಹಿಳಾ ಕ್ರಿಕೆಟಿಗರ ಎರಡು ತಂಡಗಳು ಪ್ರಮೋಷನಲ್ ಪಂದ್ಯ ಆಡಲಿವೆ.

ಈ ಪಂದ್ಯಾವಳಿಯಲ್ಲಿ ಕೋಸ್ಟಲ್‍ವುಡ್ ಕ್ವೀನ್ಸ್ ಮತ್ತು ಲೀಡ್ಸ್ ದಿವಾಸ್ ತಂಡಗಳು ಆಡಲಿವೆ. ಈ ಬಾರಿ ಇವರದು ಕೇವಲ ಪ್ರಮೋಷನಲ್ ಆಟವಾಗಿದ್ದು, ಇದಕ್ಕೆ ಯಶಸ್ಸು ದೊರಕಿದರೆ ಮುಂದೆ ದೊಡ್ಡ ಮಟ್ಟದ ಪಂದ್ಯಾಟಗಳ ಮೂಲಕ ಗಮನ ಸೆಳೆಯಲಿದ್ದೇವೆ ಎಂದು ಕೋಸ್ಟಲ್‍ವುಡ್ಸ್ ಕ್ವೀನ್ ತಂಡದ ನಾಯಕಿ ರಕ್ಷಿತ ರೈ ತಿಳಿಸಿದ್ದಾರೆ.

‘ಬಿರುವೆರ್ ಕುಡ್ಲ ರಾಕರ್ಸ್’, ‘ತುಳುನಾಡು ಸ್ಪಾರ್ಟಾನ್ಸ್’, ‘ಕುಡ್ಲ ನೈಟ್ ರೈಡರ್ಸ್’, ‘ರಾಯಲ್ ರೇಂಜರ್ಸ್’, ‘ಕೋಸ್ಟಲ್ ಕಮಾಂಡೋಸ್’. ‘ಲೀಡ್ಸ್ ವಾರಿಯರ್ಸ್’. ‘ಚಾಲೆಂಜಿಂಗ್ ಸ್ಟಾರ್ಸ್’, ‘ಕುಂಪಲ ಪ್ಯಾಂಥರ್ಸ್’ ಇವಿಷ್ಟು ಸಿಪಿಎಲ್ 2019ರಲ್ಲಿ ಆಡಲಿರುವ 8 ತಂಡಗಳಾಗಿವೆ. ಇದರಲ್ಲಿ ಅರ್ಜುನ್ ಕಾಪಿಕಾಡ್, ಪೃಥ್ವಿ ಅಂಬರ್, ಅನೂಪ್ ಸಾಗರ್, ಪ್ರತೀಕ್ ಶೆಟ್ಟಿ, ಅಸ್ತಿಕ್ ಅವಿನಾಶ್ ಶೆಟ್ಟಿ ಮೊದಲಾದವರು ಆಡಲಿದ್ದಾರೆ.

















