Tuesday, April 28, 2026
ಸುದ್ದಿ

ಕೌಡಿಚ್ಚಾರಿನಲ್ಲಿ ಸೇತುವೆ ಮೇಲಿಂದ ಬಿದ್ದ ಕಾರು – ಕಹಳೆ ನ್ಯೂಸ್

ಕಾರೊಂದು ಸೇತುವೆಯ ಮೇಲಿಂದ ಕೆಳಗೆ ಬಿದ್ದು ನಜ್ಜುಗುಜ್ಜಾದ ಘಟನೆ ಕೌಡಿಚ್ಚಾರಿನ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಕಾರು ಚಾಲಕ ನಿದ್ರೆಯ ಮಂಪರಿನಲ್ಲಿ ಕಾರು ಚಲಾಯಿಸುತ್ತಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಮಂಡ್ಯದಿಂದ ಕುಂದಾಪುರಕ್ಕೆ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ನಸುಕಿನ ಜಾವ 3 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು ಕಾರು ಸೇತುವೆಗೆ ಡಿಕ್ಕಿ ಹೊಡೆದು ಕೆಳಗೆ ಉರುಳಿದೆ ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದವರು ಕುಂದಾಪುರ ಮೂಲದವರಾಗಿದ್ದು, ಗಾಯಳುಗಳನ್ನ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಸ್ಧಳಕ್ಕೆ ಸಂಪ್ಯ ಪೂಲೀಸರು ಆಗಮಿಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು