
ಪಂಜಾಬ್: ಮಂಡ್ಯ ಲೋಕಸಭಾ ಚುನಾವಣಾ ಕಣದಲ್ಲಿ ಯಶ್ ಹಾಗೂ ದರ್ಶನ್‍ಗೆ ಅಭಿಮಾನಿಗಳು ಮುತ್ತು ಕೊಡುವ ಸಂಭ್ರಮ ಕಾಣಸಿಕ್ಕಿತ್ತು. ಈ ಕಿಸ್ಸಿಂಗ್ ಅಭಿಯಾನ ಇದೀಗ ಉತ್ತರ ಭಾರತಕ್ಕೂ ವ್ಯಾಪಿಸಿದೆ. ನಿನ್ನೆ ಪಂಜಾಬ್‍ನ ಗುರುದಾಸ್‍ಪುರ ಕ್ಷೇತ್ರದ ಬಟಾಲಾ ಎಂಬಲ್ಲಿ ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್ ಪ್ರಚಾರ ಮಾಡುತ್ತಿದ್ದರು. ಬಿಸಿಲನ್ನೂ ಲೆಕ್ಕಿಸದೇ ಸನ್ನಿ ಡಿಯೋಲ್ ಕ್ಯಾಂಪೇನ್ ನಡೆಸುತ್ತಿದ್ದ ವೇಳೆ, ಇದ್ದಕ್ಕಿದ್ದಂತೆ ಪ್ರಚಾರದ ವಾಹನವೇರಿದ ಮಹಿಳೆಯೊಬ್ಬರು ಸನ್ನಿ ಬಳಿ ಡಿಮ್ಯಾಂಡ್‍ವೊಂದನ್ನ ಇಟ್ಟಿದ್ದಾರೆ. ಅಲ್ಲದೇ ಆಕೆಯ ಬೇಡಿಕೆಗೆ ಸನ್ನಿ ಯೆಸ್ ಎನ್ನುವ ಮೊದಲೇ, ಸನ್ನಿ ಡಿಯೋಲ್‍ಗೆ ಕಿಸ್ ಕೊಟ್ಟಿದ್ದಾರೆ.
ಬಳಿಕ ಸ್ವತಃ ಸನ್ನಿ ಡಿಯೋಲ್ ಆ ಮಹಿಳೆಯ ಕೈ ಹಿಡಿದು ವಾಹನದಿಂದ ಕೆಳಗಿಳಿಸಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಜನರು ಟ್ಟೀಟ್‍ಗಳ ಸುರಿಮಳೆಗೈಯ್ಯುತ್ತಿದ್ದಾರೆ.














