Thursday, March 12, 2026
ರಾಜಕೀಯಸುದ್ದಿ

ನೀವು ಕಪಾಳಕ್ಕೆ ಹೊಡೆದರೆ ಆಶೀರ್ವಾದವಿದ್ದಂತೆ: ದೀದಿಗೆ ಮೋದಿ ತಿರುಗೇಟು – ಕಹಳೆ ನ್ಯೂಸ್

ನವದೆಹಲಿ: ನೀವು ಕಪಾಳಕ್ಕೆ ಹೊಡೆದರೆ ನಮಗೆ ಅದು ಆಶೀರ್ವಾದದಂತೆ ಎಂದು ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ತಿರುಗೇಟು ನೀಡಿದ್ದಾರೆ.

ಎರಡು ದಿನಗಳ ಹಿಂದೆ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ ಪ್ರತಿ ಬಾರಿ ತೃಣಮೂಲ ಪಕ್ಷವನ್ನು ಸುಲಿಗೆಕೋರರು, ದರೋಡೆಕೋರರು ಅಂದಾಗಲೆಲ್ಲಾ ಅವರಿಗೆ ಪ್ರಜಾಪ್ರಭುತ್ವದಿಂದ ಕಪಾಳಮೋಕ್ಷ ಮಾಡಬೇಕು ಅಂತ ನನಗೆ ಅನ್ನಿಸುತ್ತದೆ ಎಂದಿದ್ರು. ಇದಕ್ಕೆ ಇಂದು ಪುರುಲಿಯಾದಲ್ಲಿ ನಡೆದ ರ‍್ಯಾಲಿಯಲ್ಲಿ ಪ್ರತಿಕ್ರಿಯಿಸಿದ ಮೋದಿ, ದೀದಿಯಿಂದ ಬರೋ ಕಪಾಳಮೋಕ್ಷವನ್ನ ನಾನು ಆಶೀರ್ವಾದ ಎಂದು ಪರಿಗಣಿಸುತ್ತೇನೆ ಅಂದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನನಗೆ ದೀದಿ ಕಪಾಳಕ್ಕೆ ಹೊಡೀಬೇಕು ಅಂತ ಹೇಳಿದ್ದಾಗಿ ಕೇಳ್ಪಟ್ಟೆ. ದೀದಿ.. ಓ ದೀದಿ. ನಾನು ನಿಮ್ಮನ್ನು ದೀದಿ ಅಂತ ಕರೆಯುತ್ತೇನೆ, ನಿಮ್ಮನ್ನು ಗೌರವಿಸುತ್ತೇನೆ. ನಿಮ್ಮ ಕಪಾಳಮೋಕ್ಷ ನನಗೆ ಆಶೀರ್ವಾದವಿದ್ದಂತೆ. ನಾನು ಅದನ್ನ ಸ್ವೀಕರಿಸುತ್ತೇನೆ ಎಂದು ಮೋದಿ ಹೇಳಿದ್ರು. ಹಾಗೇ ಇದನ್ನೂ ಹೇಳ್ತೀನಿ ಕೇಳಿ- ಪೂರ್ವಾ ಚಿಟ್ ಫಂಡ್ಸ್‍ನಿಂದ ಹಣ ಕದ್ದ ನಿಮ್ಮ ಸಹೋದ್ಯೋಗಿಗಳ ಕಪಾಳಕ್ಕೆ ಹೊಡೆಯೋ ಧೈರ್ಯ ನಿಮಗೆ ಇದ್ದಿದ್ರೆ, ನೀವು ಭಯಪಡುತ್ತಿರಲಿಲ್ಲ ಎಂದು ಕುಟುಕಿದ್ರು.

ಜಾಹೀರಾತು
ಜಾಹೀರಾತು

ಇನ್ನು ಪ್ರಧಾನಿಯ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಸಿರೋ ಮಮತಾ ಬ್ಯಾನರ್ಜಿ, ನಾನು ಪ್ರಧಾನಿಗೆ ಕಪಾಳಕ್ಕೆ ಹೊಡೆಯಬೇಕೆಂದು ಹೇಳಿಲ್ಲ, ಪ್ರಜಾಪ್ರಭುತ್ವದಿಂದ ಕಪಾಳಮೋಕ್ಷ ಮಾಡಬೇಕು ಎಂದು ಹೇಳಿದ್ದೇನೆ. ಭಾಷೆಯನ್ನ ಅರ್ಥ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.