
ಇವತ್ತು ತೆಲುಗಿನ ಚಾಕೋಲೇಟ್ ಹೀರೋ ವಿಜಯ್ ದೇವರ ಕೊಂಡಗೆ 30 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಸದಾ ಯಂಗ್ ಅಂಡ್ ಎನರ್ಜೆಟಿಕ್ ರೋಲ್‍ಗಳಲ್ಲಿ ಕಾಣಿಸಿಕೊಂಡು ಅಪಾರ ನಾರಿಯರ ಮನಗೆದ್ದ ಲವರ್ ಬಾಯ್‍ಗೆ ಟಾಲಿವುಡ್ ಸೇರಿದಂತೆ ಹಲವು ಸಿನಿ ತಾರೆಯರು ಶುಭ ಹಾರೈಸುತ್ತಿದ್ದಾರೆ. ಇದೀಗ ಕನ್ನಡದ ಚೆಂದುಳ್ಳಿ ಚೆಲುವೆ ರಶ್ಮಿಕಾ ಮಂದಣ್ಣ ವಿಜಯ್‍ರ ಡಿಫ್ರೆಂಟಾಗಿ ಶುಭಕೋರಿದ್ದಾರೆ.

ಮೇಕಪ್ ಪೋಟೋ ಹಾಕಿ ವಿಶ್..!
ವಿಜಯ್ ಮತ್ತು ರಶ್ಮಿಕಾ ಜೋಡಿ ಟಾಲಿವುಡ್‍ನಲ್ಲಿ ತುಂಬಾನೇ ಮುದ್ದಾದ ಜೋಡಿ ಅನ್ನೋದು ನಿಮಗೆಲ್ಲಾ ಗೊತ್ತಿದೆ. ಅಂದ್ಹಾಗೆ ಇಬ್ಬರ ಕಾಂಬಿನೇಷನ್ ಸಿನಿಮಾಗಳು ಅಂದ್ರೆ ಸಖತ್ ಕ್ರೇಜ್ ಇರುತ್ತೆ. ಯಾವಾಗ್ಲೂ ತಮಾಷೆಯಾಗಿ ಒಬ್ಬರಿಗೊಬ್ಬರು ಕಾಲೇಳಿತಾ ಇರ್ತಾರೆ. ಇದೀಗ ಹುಟ್ಟುಹಬ್ಬದ ವಿಶೇಷವಾಗಿ ವಿಜಯ್ ತಲೆಗೆ ಮೇಕಪ್ ಮಾಡಿರೋ ಫೋಟೋವೊಂದನ್ನು ರಶ್ಮಿಕಾ ಶೇರ್ ಮಾಡಿದ್ದಾರೆ. ಅದರಲ್ಲಿ ಡಿಯರ್ ಬಾಬಿ ನಿನ್ನ ಹುಟ್ಟುಹಬ್ಬಕ್ಕೆ ನನ್ನ ಕಡೆಯಿಂದ ಶುಭಾಶಯಗಳು. ನೀನು ನನ್ನ ಹುಟ್ಟುಹಬ್ಬದಲ್ಲೂ ಇದೇ ರೀತಿಯಲ್ಲಿ ಶುಭಕೋರಿದ್ದೆ ಲಿಲ್ಲಿ ಅಂತಾ ತಮಾಷೆಯಾಗಿ ಬರೆದುಕೊಂಡಿದ್ದಾರೆ. ಸದ್ಯ ಇಬ್ಬರ ಕಾಂಬಿನೇಷನ್‍ನಲ್ಲಿ ಡಿಯರ್ ಕಾಮ್ರೇಡ್ ಚಿತ್ರ ರೆಡಿಯಾಗಿದ್ದು ತೆರೆಮೇಲೆ ಅಪ್ಪಳಿಸೋಕೆ ರೆಡಿಯಾಗಿದೆ. ಇದೊಂದು ಪಕ್ಕಾ ರೊಮ್ಯಾಂಟಿಕ್ ಚಿತ್ರವಾಗಿದ್ದು ಇಬ್ಬರ ಕಾಂಬಿನೇಷನ್ ಮತ್ತೆ ಕಮಾಲ್ ಮಾಡಲಿದೆ.









