ಗೂಂಡಾಗಿರಿ ಮಾಡಲು ಇದು ಕನಕಪುರ ಅಲ್ಲ, ನಮ್ಮ ತಂಟೆಗೆ ಬಂದರೆ ಪರಿಣಾಮ ನೆಟ್ಟಗಿರಲ್ಲ; ಡಿಕೆಶಿಗೆ ಜಗದೀಶ್ ಶೆಟ್ಟರ್ ಎಚ್ಚರಿಕೆ – ಕಹಳೆ ನ್ಯೂಸ್

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಫೇಲ್ ಯುದ್ಧ ವಿಮಾನ ಖರೀದಿ ಬಗ್ಗೆ ರಾಹುಲ್ ಗಾಂಧಿ ಪ್ರಧಾನಿಗೆ ಚೌಕೀದಾರ್ ಚೋರ್ ಹೈ ಅಂತ ಹೇಳಿದ್ರು. ಅದಕ್ಕೆ ಸುಪ್ರೀಂ ಛೀಮಾರಿ ಹಾಕಿತು. ನಂತರ ಈ ಬಗ್ಗೆ ರಾಹುಲ್ ಕ್ಷಮೆ ಕೇಳಿದರು. ಮೈತ್ರಿ ಲೋಕಸಭೆ ಫಲಿತಾಂಶದವರೆಗೆ ಮಾತ್ರ ಅಂತ ಮಾತುಕತೆ ಆಗಿದೆ. ಈ ಬಗ್ಗೆ ಸಿದ್ದರಾಮಯ್ಯ ಅವರೇ ಸಿಗ್ನಲ್ ಕೊಟ್ಟಿದ್ರು. ಲೋಕಸಭೆ ಫಲಿತಾಂಶದ ನಂತರ ಸಮ್ಮಿಶ್ರ ಸರ್ಕಾರ ಇರೋದಿಲ್ಲ. ಈಗಾಗಲೇ ಸಿದ್ದರಾಮಯ್ಯ ಅವರನ್ನು ಸಿಎಂ ಎಂದು ಬಿಂಬಿಸಲಾಗುತ್ತಿದೆ. ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಘೋಷಿಸಿದ್ದರು. ಆ ಮಾತು ಈಗ ಎಲ್ಲಿಗೆ ಬಂತು ಎಂದು ಜಗದೀಶ್ ಶೆಟ್ಟರ್ ಪ್ರಶ್ನಿಸಿ, ದಲಿತರನ್ನು ಸಿಎಂ ಮಾಡ್ತೇನಿ ಅಂತ ಸಿದ್ದರಾಮಯ್ಯ ಹೇಳಿದ್ರು. ಅವರ ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ. ಸಿದ್ದರಾಮಯ್ಯ ಸುಳ್ಳುಗಾರರಲ್ಲೇ ಮಹಾ ಸುಳ್ಳುಗಾರ ಎಂದು ಜರಿದರು.
ಕುಮಾರಸ್ವಾಮಿ, ದೇವೇಗೌಡರು ಟೆಂಪಲ್ ರನ್ ಮಾಡ್ತಿದ್ದಾರೆ. ಸೋಲಿನ ಭೀತಿಯಿಂದ ಈ ರೀತಿ ಮಾಡುತ್ತಿದ್ದಾರೆ. ಹೋಮ ಹವನ ಮಾಡುವುದರಿಂದ ಇವಿಎಂ ನಲ್ಲಿನ ಮತ ಬದಲಾವಣೆ ಆಗುತ್ತಾ. ಇದು ನೆರವೇರಿದರೆ ಪವಾಡವೇ ಆಗಿ ದೇವೇಗೌಡರೇ ಮತ್ತೆ ಪಿಎಂ ಆಗುತ್ತಾರೆ ಎಂದು ಲೇವಡಿ ಮಾಡಿದರು














