Thursday, March 19, 2026
ಸುದ್ದಿ

ಉಪ್ಪಿನಂಗಡಿ ; ರಸ್ತೆ ಅಪಘಾತ : ಮಾನವೀಯ ಮೆರೆದ ಫಾರೂಕ್ ಝಿಂದಗಿ – ಕಹಳೆ ನ್ಯೂಸ್

ಉಪ್ಪಿನಂಗಡಿ ; ಬೈಕ್ ಹಾಗು ಹೋಂಡಾ ಎಕ್ಟಿವಾ ಮದ್ಯೆ ಅಪಘಾತ ಸಂಭವಿಸಿದ ಘಟನೆ ಉಪ್ಪಿನಂಗಡಿ ಮಠ ಮಸೀದಿ ಮುಂಭಾಗದಲ್ಲಿ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಉಪ್ಪಿನಂಗಡಿ ಜೆಸ್ಟ್ ಬೇಕರಿ ಮಾಲೀಕ ಹನೀಫ್ ಜೀವನ್ಮರಣ ಹೋರಾಟದಲ್ಲಿದ್ದಾರೆ. ಹೋಂಡಾ ಬೈಕ್ ಸವಾರರಾದ ಹರಿದಾಸ ಭಟ್ ಕಳಯ ತೀವ್ರ ಸ್ವರೂಪದ ಗಾಯಗಳಾಗಿದ್ದು ಕೋಮಾದಲ್ಲಿದ್ದರೆ. ಇವರನ್ನ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಅಪಘಾತ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಇವರನ್ನ ಕಂಡು ಉಪ್ಪಿನಂಗಡಿಯ ಫಾರೂಕ್ ಝಿಂದಗಿ ಮಾನವೀಯತೆ ಮೆರೆದಿದ್ದಾರೆ. ಗಾಯಗೊಂಡವರ ಸಂಬಂದಿಕರು ಜೊತೆಗೆ ಇಲ್ಲದಿದ್ದ ಕಾರಣ ಈ ಇಬ್ಬರು ಗಾಯಾಳುಗಳನ್ನೂ ಆಂಬ್ಯುಲೆನ್ ಮೂಲಕ ಮಂಗಳೂರು ಆಸ್ಪತ್ರೆಗೆ ದಾಖಲಿಸಿ, ಗಾಯಗೊಂಡವರ ಜೊತೆಗೆ ಬೆಳಗಿನವರೆಗೆ ಇದ್ದು ರಕ್ತ ದಾನದ ವ್ಯವಸ್ಥೆ ಮಾಡಿ, ಗಾಯಾಳುಗಳನ್ನೂ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಫಾರೂಕ್ ಆಟೋರಿಕ್ಷಾ ಚಾಲಕರಾಗಿದ್ದು ಸಮಾಜ ಸೇವೆಯಲ್ಲಿ ತಮ್ಮನ ತಾವು ತೊಡಗಿಕೊಂಡವರು.

ಜಾಹೀರಾತು
ಜಾಹೀರಾತು