Thursday, March 19, 2026
ಸುದ್ದಿ

ಕಬಿನಿ ಜಲಾಶಯದಲ್ಲಿ ‘ಡಿ’ಬಾಸ್ ಮಾಡಿದ್ದೇನು ಗೊತ್ತಾ..?- ಕಹಳೆ ನ್ಯೂಸ್

ಕಳೆದ ತಿಂಗಳು ಮಂಡ್ಯ ಲೋಕಸಭಾ ಚುನಾವಣೆಗಾಗಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದ ದರ್ಶನ್ ಇದೀಗ ಬಿಡುವಾಗಿದ್ದಾರೆ. ಸದ್ಯ ಸಿನಿಮಾ ಶೂಟಿಂಗ್‍ಗೆ ಕೊಂಚ ಬ್ರೇಕ್ ಕೊಟ್ಟು ಪ್ರಾಣಿ ಪಕ್ಷಿಗಳ ಪ್ರಪಂಚದಲ್ಲಿ ಕಾಲ ಕಳೆಯುತ್ತಾರೆ. ಹೌದು ದರ್ಶನ್ ಕಬಿನಿ ಜಲಾಶಯದಲ್ಲಿ ಸ್ನೇಹಿತರೊಂದಿಗೆ ಸಫಾರಿ ಮಾಡುತ್ತಿದ್ದಾರೆ. ಇನ್ನು ದರ್ಶನ್ ಬಿಡುವಿದ್ದಾಗಲೆಲ್ಲಾ, ಇಲ್ಲಿಗೆ ಬರುತ್ತಾರೆ. ಹಾಗೆಯೇ ತಮ್ಮ ಕ್ಯಾಮೆರಾದಲ್ಲಿ ಅಲ್ಲಿನ ಕೆಲವು ಅದ್ಭುತ ದೃಶ್ಯಗಳನ್ನು ಸೆರೆ ಹಿಡಿಯುತ್ತಾರೆ. ಮೂಲಕ ಅವರು ವನ್ಯಜೀವಿ ಪ್ರಿಯರು ಎಂದು ಸಹ ತೋರಿಸಿ ಕೊಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ದರ್ಶನ್ ಕೆಲವು ತಿಂಗಳುಗಳ ಹಿಂದೆಯಷ್ಟೇ ನಾಗರಹೊಳೆ ಅಭಿಯಾರಣ್ಯ ಸೇರಿದಂತೆ ಕಬಿನಿ ಜಲಾಶಯದಲ್ಲೂ ಸ್ನೇಹಿತರೊಂದಿಗೆ ಸೇರಿಕೊಂಡು ಓಡಾಡಿದ್ದರು. ಈ ಮೂಲಕ ಅವರು ಕಾಡು ಹಾಗೂ ವನ್ಯಜೀವಿಗಳ ಬಗ್ಗೆ ಸಾಕಷ್ಟು ಪ್ರೀತಿ ತೋರಿಸುತ್ತಾರೆ.

ಜಾಹೀರಾತು
ಜಾಹೀರಾತು

ಹೀಗಾಗಿಯೇ ದರ್ಶನ್‍ರನ್ನು ಕರ್ನಾಟಕದಲ್ಲಿ ಅರಣ್ಯ ಇಲಾಖೆಯ ರಾಯಭಾರಿಯಾಗಿ ಆಯ್ಕೆ ಮಾಡಿದ್ದರು. ಅರಣ್ಯ ಇಲಾಖೆಯ ರಾಯಭಾರಿಯಾದ ಕಾರಣ ದರ್ಶನ್ ಅವರು ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆಯ ಸಂದೇಶ ಸಾರುವ ಕೆಲಸವನ್ನು ಮಾಡಬೇಕು. ಜೊತೆಗೆ ಅರಣ್ಯಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಬೇಕಾಗುತ್ತದೆ.