
ಉಜಿರೆ : ಚಲಿಸುತ್ತಿದ್ದ ಕಾರಿನ ಮೇಲೆ ಭಾರಿ ಗಾತ್ರದ ಮರ ಬಿದ್ದು ಕಾರ್‌ನಲ್ಲಿದ್ದ ಇಬ್ಬರು ಸ್ಧಳದಲ್ಲೆ ಸಾವನ್ನಾಪ್ಪಿದ ಘಟನೆ ದ.ಕ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ಉಜಿರೆಯ ಸಿದ್ಧವನದ ಬಳಿ ನಡೆದಿದೆ. ಮರ ಉರುಳಿದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜುಗಿದೆ. ಧರ್ಮಸ್ಥಳದಿಂದ ಉಜಿರೆ ಕಡೆಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಏಕಾಏಕಿ ಮರ ಉರುಳಿ ಬಿದ್ದಿದ್ದು ಎದುರಿನ ಸೀಟ್‍ನಲ್ಲಿ ಕುಳಿತಿದ್ದ ವಿಘ್ನೇಶ್ ಮತ್ತು ಕ್ಷಿತಿಜ್ ಜೈನ್ ಸ್ಧಳದಲ್ಲೆ ಸಾವನ್ನಾಪ್ಪಿದ್ದಾರೆ. ಇನ್ನು ಹಿಂಬದಿಯಲ್ಲಿ ಕುಳಿತಿದ್ದ ಸುಶಾಂತ್ ಮತ್ತು ಹರ್ಷಿತ್‍ಗೆ ಗಂಭೀರ ಗಾಯವಾಗಿದ್ದು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.



















