Tuesday, April 28, 2026
ಸುದ್ದಿ

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಬಿಜೆಪಿಗೆ ಮತ: ಸಚಿವ ಜಿ.ಟಿ.ದೇವೇಗೌಡ – ಕಹಳೆ ನ್ಯೂಸ್

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಸಚಿವ ಜಿ.ಟಿ.ದೇವೇಗೌಡ ಅವರು ಬುಧವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮೈತ್ರಿಯಲ್ಲಿ ತಪ್ಪು ಎರಡೂ ಕಡೆ ಆಗಿದೆ. ಒಂದು ಪಕ್ಷದಿಂದ ಅಲ್ಲ
ನಾವು ಒಟ್ಟಿಗೆ ಕೆಲಸ ಮಾಡಬೇಕಿತ್ತು, ಆದರೆ ಕಾಂಗ್ರೆಸ್‌ – ಜೆಡಿಎಸ್‌ ಜಿದ್ದಾಜಿದ್ದಿನ ಚುನಾವಣೆ ನಡೆಸಿದ್ದವು. ಕಾಂಗ್ರೆಸ್‌ನವರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಆದರೆ ಜೆಡಿಎಸ್‌ನವರು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಉದ್ಭೂರು ಗ್ರಾಮ ಪಂಚಾಯತ್‌ ಸೇರಿದಂತೆ ಹಲವು ಕಡೆ ಹೀಗಾಗಿದೆ ಎಂದು ಜಿಟಿಡಿ ಹೇಳಿಕೆ ನೀಡಿದ್ದಾರೆ.

ನೇರವಾಗಿ ವಿಧಾನಸಭಾ ಚುನಾವಣೆಯಂತೆ ಆಯಾ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಿತ್ತು ಎಂದರು.

2 ತಿಂಗಳು ಮುಂಚೆನೇ ಮಾಡಿದ್ದರೆ ನಾವು ಹೆಚ್ಚು ಲಾಭ ಪಡೆಯಬಹುದಿತ್ತು ಆದರೆ ಕೊನೇ ಕ್ಷಣದಲ್ಲಿ ಕಾರ್ಯಕರ್ತರ ನಡುವೆ ಹೊಂದಾಣಿಕೆ ಸಾಧ್ಯವಾಗಲಿಲ್ಲ ಎಂದರು.

ಮೈಸೂರು – ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಸಿ.ಎಚ್‌.ವಿಜಯ್‌ಶಂಕರ್‌ ಮತ್ತು ಬಿಜೆಪಿಯಿಂದ ಹಾಲಿ ಸಂಸದ ಪ್ರತಾಪ್‌ ಸಿಂಹ್‌ ಅವರ ನಡುವೆಸ್ಪರ್ಧೆ ನಡೆದಿದೆ. ಫ‌ಲಿತಾಂಶ ಏನಾಗಲಿದೆ ಎನ್ನುವ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ.