Tuesday, April 28, 2026
ಸುದ್ದಿ

ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ – ಎಸ್. ಎಸ್. ಎಲ್. ಸಿ ಫಲಿತಾಂಶ 2018-19 – ಕಹಳೆ ನ್ಯೂಸ್

2018-19ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಶ್ರೀರಾಮ ಪ್ರೌಢಶಾಲೆ ಒಟ್ಟು 334 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 272 ವಿದ್ಯಾರ್ಥಿಗಳು ತೇರ್ಗಡೆಗೊಳ್ಳುವ ಮೂಲಕ ಶಾಲೆಯು 82% ಫಲಿತಾಂಶ ಗಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅಭಿಷೇಕ್ 602 ಅಂಕಗಳನ್ನು ಪಡೆಯುವ ಮೂಲಕ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಪ್ರದೀಪ 599, ದಿವ್ಯಶ್ರೀ 591, ಸೃಜನ್ ಯು. ಆಚಾರ್ಯ 589, ಅನುಶ್ರೀ 588, ಪ್ರತಿಭಾ ಕೆರಿಯಾ ಮರಾಠಿ 587, ಯಶ್ವಿತಾ 586, ಸೂರಜ್ ಎಸ್. 586, ಅರ್ಚನಾ 582, ದಿವ್ಯಾದೀಪ 581, ಪ್ರೇಕ್ಷಾ 581, ಸುಸ್ಮಿತಾ 577, ಚೈತ್ರಾ ಕೆ 572, ವೈಷ್ಣವಿ 572, ಭವ್ಯಾ 572, ಧೀರಜ್ ಯು 570, ವಸುಧಾ 566, ಸುದಾಂಶು ಕೆ.ಹೆಚ್ 564 ಒಟ್ಟು 18 ವಿದ್ಯಾರ್ಥಿಗಳು A+ ಶ್ರೇಣಿಯಲ್ಲಿ, ಹಾಗೂ 54 ವಿದ್ಯಾರ್ಥಿಗಳು A ಶ್ರೇಣಿಯಲ್ಲಿ, 58 ವಿದ್ಯಾರ್ಥಿಗಳು B+ ಶ್ರೇಣಿಯಲ್ಲಿ, 86 ವಿದ್ಯಾರ್ಥಿಗಳು B ಶ್ರೇಣಿಯಲ್ಲಿ, 50 ವಿದ್ಯಾರ್ಥಿಗಳು C+ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು C ಶ್ರೇಣಿಯಲ್ಲಿ ಉತ್ತೀರ್ಣತೆ ಹೊಂದಿರುತ್ತಾರೆ.

ಅಭಿಷೇಕ್, ಚೈತ್ರಾ ಕೆ, ಶ್ರೀಗೌರಿ, ವಸುಧಾ, ಪ್ರದೀಪ ಸಂಸ್ಕೃತದಲ್ಲಿ 125ರಲ್ಲಿ 125, ಪ್ರದೀಪ ಗಣಿತದಲ್ಲಿ 100ರಲ್ಲಿ 100, ಪ್ರೇಕ್ಷಾ ಮತ್ತು ಸುಸ್ಮಿತಾ ಪ್ರಥಮ ಭಾಷೆ ಕನ್ನಡದಲ್ಲಿ 125ರಲ್ಲಿ 125, ವೈಷ್ಣವಿ ತೃತೀಯ ಭಾಷೆ ಹಿಂದಿಯಲ್ಲಿ 100ರಲ್ಲಿ 100, ಯಶ್ವಿತಾ ಹಾಗೂ ವೈಷ್ಣವಿ ತೃತೀಯ ಭಾಷೆ ಕನ್ನಡದಲ್ಲಿ 100ರಲ್ಲಿ 100 ಅಂಕಗಳನ್ನು ಪಡೆದಿರುತ್ತಾರೆ.

ಉತ್ತೀರ್ಣಗೊಂಡ 272 ವಿದ್ಯಾರ್ಥಿಗಳಲ್ಲಿ39 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲೂ ಹಾಗೂ 174 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿರುವುದು ವಿಶೇಷತೆಯಾಗಿದೆ.