Tuesday, April 28, 2026
ಸುದ್ದಿ

ಸಾಧಕರ ಸೀಟ್‍ನಲ್ಲಿ ಕುಳಿತುಕೊಳ್ಳಲಿದ್ದಾರೆ ಮೋಹಕ ತಾರೆ – ಕಹಳೆ ನ್ಯೂಸ್

ಒಂದು ಕಾಲದಲ್ಲಿ ಮೋಹಕ ತಾರೆಯಾಗಿ ದಶಕಗಳ ಕಾಲ ಚಿತ್ರರಂಗದಲ್ಲಿದ್ದು ಸ್ಯಾಂಡಲ್ ವುಡ್ ಪಾಲಿಗೆ ಪದ್ಮಾವತಿಯಾಗಿರುವ ಚೆಲುವೆ ರಮ್ಯ ಇದೀಗ ಸಾಧಕರ ಸೀಟ್ ನಲ್ಲಿ ಕುಳಿತುಕೊಳ್ಳಲಿದ್ದಾರೆ. ಪುನೀತ್ ರಾಜ್ ಕುಮಾರ್ ನಟನೆಯ ‘ಅಭಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್‍ಗೆ ಎಂಟ್ರಿ ಕೊಟ್ಟ ರಮ್ಯ , ನಂತರ ‘ಎಕ್ಸ್ ಕ್ಯೂಸ್ ಮೀ’, ‘ರಂಗ ಎಸ್ ಎಸ್ ಎಲ್ ಸಿ’, ‘ಅಮೃತಧಾರೆ’ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು, ಕೊನೆಯ ಚಿತ್ರ 2016ರಲ್ಲಿ ನಾಗರ ಹಾವು ಸಿನೆಮಾದಲ್ಲಿ ನಟಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಸಿನಿಮಾ ಆದ ಮೇಲೆ ಚಿತ್ರರಂಗದಿಂದ ದೂರ ಸರಿದು ಸಂಪೂರ್ಣವಾಗಿ ರಾಜಕೀಯದತ್ತ ವಾಲಿದರು ರಮ್ಯ. ಅಲ್ಲಿ ಸಕಾರಾತ್ಮಕವಾಗಿ, ನಕಾರಾತ್ಮಕವಾಗಿ, ಕಾಲೆಳೆಸಿಕೊಂಡರು. ರಮ್ಯಾ ಮೇಡಂ ಕನ್ನಡ ಚಿತ್ರರಂಗಕ್ಕೆ ವಾಪಸ್ ಬರುವ ಸಾಧ್ಯತೆಗಳಿವೆಯಂತೆ.

ಹೀಗೆ ಯಾವುದೇ ಸಿನಿ ರಂಗದ ಹಿನ್ನೆಲೆಯಿಲ್ಲದೇ ತನ್ನ ಪ್ರತಿಭೆಯಿಂದಲೇ ಗುರುತಿಸಿಕೊಂಡಿದ್ದ ರಮ್ಯ ಇದೀಗ ಕನ್ನಡದ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗುವ ಸಾಧ್ಯತೆಗಳಿವೆ.