
ಸುಳ್ಯ ತಾಲೂಕು ಅರಂತೋಡಿನ ಶಾಲಾ ಬಳಿ ಗೋವಧೆ ಮಾಡಿ ಮಾಂಸ ಮಾರಾಟ ಮಾಡಲಾಗುತ್ತಿದ್ದ ಎಂಬ ಖಚಿತ ಮಾಹಿತಿ ಮೇರೆಗೆ ಸುಳ್ಯ ಪೊಲೀಸರು ರೈಡ್ ಮಾಡಿದ ಘಟನೆ ನಡೆದಿದೆ. ಅರಂತೋಡು ಶಾಲಾ ಬಳಿಯ ಸಂಶುದ್ದಿನ್ ಮನೆಯ ಹಿಂಬದಿಯಲ್ಲಿ ಅಕ್ರಮವಾಗಿ ಗೋವನ್ನು ವಧೆ ಮಾಡಿ ಮಾಂಸವನ್ನು ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿ ಸರ್ಫುದ್ದಿನ್‍ನನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆಯಲ್ಲಿ ಮುನೀರ್ ಮತ್ತು ಮುಬಾರಕ್ ಎಂಬವರುಗಳು ಓಡಿ ಹೋಗಿದ್ದು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ದನವನ್ನು ವಧೆ ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಕೃತ್ಯವನ್ನು ಎಸಗಿದ್ದು ಅವರ ಬಳಿಯಲ್ಲಿದ್ದ 10 ಕೇಜಿ 400 ಗ್ರಾಮ ದನದ ಮಾಂಸ, 2000 ಮತ್ತು ಸ್ಕೇಲ್, ತೂಕದ ಕಲ್ಲು, ಎರಡು ಚೂರಿಗಳು, ಮರದ ತುಂಡುಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.















