
ನವದೆಹಲಿ : ಭಾರತೀಯ ಸೇನೆಗೆ ಅತ್ಯಂತ ಯಶಸ್ವಿ ಹಾಗೂ ಪ್ರಬಲ ಕ್ಷಿಪಣಿಯಾದ ‘ಬ್ರಹ್ಮೋಸ್’ ಸುಧಾರಿತ ಕ್ಷಿಪಣಿ ಸೇರ್ಪಡೆಯಾಗಲಿದೆ.ಈ ಕುರಿತು ಬ್ರಹ್ಮೋಸ್ ಏರೋಸ್ಪೇಸ್ ಕಂಪೆನಿಯ ಆಡಳಿತ ಸಹ ನಿರ್ದೆಶಕ ಅಲೆಕ್ಸಾಂಡರ್ ಮಾಸ್ಕಿವ್ ಮಾತನಾಡಿ, ‘ಪ್ರಸ್ತುತ ಬ್ರಹ್ಮೋಸ್‍ನ ಗರಿಷ್ಠ ವೇಗ 2.8 ಮ್ಯಾಕ್‍ಗಳಷ್ಟಾಗಿದ್ದರೆ ಭವಿಷ್ಯದಲ್ಲಿ ಈ ವೇಗವನ್ನು 4.5 ಮ್ಯಾಕ್‍ಗೆ ಹೆಚ್ಚಿಸಲಾಗುವುದು ಎಂದರು. ಬ್ರಹ್ಮೋಸ್ ನ ಪ್ರಸ್ತುತ ಗುರಿ ಸಾಮಥ್ರ್ಯ 400 ಕಿಲೋಮೀಟರ್‍ಗಳಾಗಿದ್ದು, ಇದನ್ನು 500 ಕಿಲೋಮೀಟರ್ ಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದರ ಗುರಿ ಬೇಧನಾ ಸಾಮಥ್ರ್ಯದ ಜೊತೆಜೊತೆಗೆ ಹೈಪರ್ ಸೌಂಡ್ ವಿಧಾನದ ಮೂಲಕ ಈ ಕ್ಷಿಪಣಿಯ ವೇಗವರ್ಧನೆಗೂ ನಿರ್ಧರಿಸಲಾಗಿದೆ ಎನ್ನಲಾಗಿದೆ.















