
ಆಮೇಠಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆ ಚುನಾವಣೆ 2019ರ ಆಮೇಠಿ ಕ್ಷೇತ್ರದ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ತಮ್ಮ ನಾಮಪತ್ರಿಕೆ ಸಲ್ಲಿಕೆಗೂ ಮುನ್ನ ರಾಹುಲ್‍ಗಾಂಧಿಯವರು ಆಮೇಠಿಯಲ್ಲಿ ಬೃಹತ್ ರೋಡ್‍ಶೋ ನಡೆಸಿದರು. ರಾಹುಲ್‍ಗಾಂಧಿ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ರಾಹುಲ್ ಗಾಂಧಿ ಅವರ ಜತೆಗೆ ತಾಯಿ ಸೋನಿಯಾ ಗಾಂಧಿ, ಸಹೋದರಿ ಪ್ರಿಯಾಂಕ ಗಾಂಧಿ ಮತ್ತು ಅವರ ಪತಿ ರಾಬರ್ಟ್ ವಾದ್ರ ಮತ್ತು ಇಬ್ಬರು ಮಕ್ಕಳು ಹಾಜರಿದ್ದರು. ಆಮೇಠಿ ಕ್ಷೇತ್ರದಿಂದ ಬಿಜೆಪಿಯಿಂದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಣದಲ್ಲಿದ್ದು, ಎಸ್‍ಪಿ, ಬಿಎಸ್‍ಪಿ ಮತ್ತುಆರ್‍ಎಲ್‍ಡಿ ಮೈತ್ರಿ ಕೂಟವು ತನ್ನ ಪಕ್ಷದಿಂದ ಯಾರನ್ನು ಕಣಕ್ಕೆ ಇಳಿಸಿಲ್ಲ. ಇನ್ನು ಏಪ್ರಿಲ್ 4ರಂದು ಕೇರಳದ ವಾಯನಾಡುವಿನಿಂದ ಲೋಕಸಭೆಗೆ ಆಯ್ಕೆ ಬಯಸಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
















