Thursday, March 19, 2026
ಸುದ್ದಿ

ನಿಖಿಲ್ ಎಲ್ಲಿದ್ದಿಯಪ್ಪಾ? ಗೂಗಲ್ ಸರ್ಚ್ – ಕಹಳೆ ನ್ಯೂಸ್

ಚುನಾವಣೆಯ ವಾತಾವರಣ ಕಾವೇರುತ್ತಿದ್ದಂತೆ ಇಲ್ಲಸಲ್ಲದ ಸಂಭಾಷಣೆಗಳು, ಯಾವಗಿನದ್ದೋ ವಿಡಿಯೋಗಳು ಈಗ ಜೋರಾಗಿ ಸದ್ದು ಮಾಡುತ್ತಿವೆ. ಅಂತವುಗಳಲ್ಲಿ ಜಾಗ್ವಾರ್ ಸಿನೆಮಾದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಕುಮಾರಸ್ವಾಮಿ ತಮ್ಮ ಮಗನೊಂದಿಗೆ ನಡೆಸಿದ ಸಂಭಾಷಣೆಯ ತುಣುಕು ಎಲ್ಲೆಂದರಲ್ಲಿ ವ್ಯಾಪಕವಾಗಿ ಟ್ರೋಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣಗಳ ಮೂಲೆ ಮೂಲೆಯಲ್ಲೂ ನಿಖಿಲ್ ಎಲ್ಲಿದ್ದಿಯಪ್ಪ ಎಂಬ ಪದಗಳೇ ಕಾಣಸಿಗುತ್ತಿವೆ. ಇನ್ನು ನಿಖಿಲ್ ಎಲ್ಲಿದ್ದಾನೆಂದು ತಿಳಿಯಲು ಗೂಗಲ್ ಸರ್ಚ್ ಮಾಡಿದರೆ ಮಂಡ್ಯ ಎಂದು ಗೂಗಲ್ ತೋರಿಸುತ್ತಿತ್ತು. ಈ ಕೃತ್ಯವನ್ನು ಓರ್ವ ಪೊಲೀಸ್ ಪೇದೆ ಮಾಡಿದ್ದು ಎನ್ನಲಾಗಿದೆ. ಗೂಗಲ್ ಅದನ್ನೀಗ ಅಳಿಸಿ ಹಾಕಿದೆ. ಪೊಲೀಸ್ ಪೇದೆ ಇದೀಗ ಈ ಬಗ್ಗೆ ಸೈಬರ್ ಕ್ರೈಮ್ ಅವರ ಬಳಿ ತನಿಖೆಗೆ ಆಗ್ರಹಿಸಿರುವುದಾಗಿ ತಿಳಿದು ಬಂದಿದೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು