Monday, April 27, 2026
ಸುದ್ದಿ

ಸರ್ವೇ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಕೃಷ್ಣನ ದರ್ಶನ ಪಡೆದ ರಕ್ಷಣಾ ಸಚಿವೆ – ಕಹಳೆ ನ್ಯೂಸ್

ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿರುವ ಶೋಭಾ ಕರಂದ್ಲಾಜೆಯವರಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‍ ಸಾಥ್‍ ನೀಡಿದ್ದಾರೆ.

ಇದಕ್ಕೂ ಮೊದಲು ನಿರ್ಮಲಾ ಸೀತಾರಾಮನ್‍, ಶೋಭಾ ಕರಂದ್ಲಾಜೆ ಮತ್ತು ಶಾಸಕ ರಘುಪತಿ ಭಟ್ ಉಡುಪಿಯ ಕೃಷ್ಣ ಮಠದಲ್ಲಿ ಕೃಷ್ಣನ ದರ್ಶನ ಪಡೆದರು. ಆದರೆ ದೇಶದ ರಕ್ಷಣಾ ಸಚಿವೆ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಕೃಷ್ಣನ ದರ್ಶನ ಪಡೆದಿದ್ದು ವಿಶೇಷವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ಕನಕನ ಕಿಂಡಿಯ ಮೂಲಕ ಕೃಷ್ಣ ದರ್ಶನಕ್ಕೆ ನಿರ್ಮಲಾ ಸೀತಾರಾಮನ್‍ ಮುಂದಾದಾಗ, ಅವರ ಮುಂಭಾಗ ಮತ್ತೊಬ್ಬ ಭಕ್ತ ಕೃಷ್ಣನ ದರ್ಶನ  ಮಾಡುತ್ತಿದ್ದರು. ಈ ವೇಳೆ ಪೊಲೀಸರು ಅವರನ್ನು ಸರಿಸಲು ಮುಂದಾದಾಗ ರಕ್ಷಣಾ ಸಚಿವರು ತಡೆದು, ಅವರಿಗೆ ಕೃಷ್ಣನ ದರ್ಶನ ಪಡೆಯಲು ಅಡ್ಡಿಪಡಿಸದಂತೆ ಸೂಚಿಸಿದರು.

ನಂತರ ಸರತಿ ಸಾಲಿನಲ್ಲಿ ನಿಂತು ಅವರು ಕೃಷ್ಣನ ದರ್ಶನ ಪಡೆದರು. ನಿರ್ಮಾಲಾ ಸೀತಾರಾಮನ್‍ ಅವರ ಈ ನಡೆ ಅಲ್ಲಿದ್ದ ಭಕ್ತರಲ್ಲಿ ಖುಷಿಯುಂಟು ಮಾಡಿತ್ತು. ನಂತರ ಪಲಿಮಾರು ಸ್ವಾಮೀಜಿ ರಕ್ಷಣಾ ಸಚಿವೆಗೆ ಕೃಷ್ಣನ ಪ್ರಸಾದ, ಸೀರೆ ನೀಡಿ ಗೌರವಿಸಿದರು.