Monday, April 27, 2026
ಸುದ್ದಿ

ಜೆಟ್‌ ಏರ್‌ ವೇಸ್‌ ಸಂಸ್ಥೆಯನ್ನು ಪಾರುಗೊಳಿಸಲು ಬೇರೇನೂ ಇಲ್ಲದಿದ್ದಲ್ಲಿ ನನ್ನ ಹಣವನ್ನೇ ಬಳಸಿಕೊಳ್ಳಿ: ವಿಜಯ್‌ ಮಲ್ಯ – ಕಹಳೆ ನ್ಯೂಸ್

ಹೊಸದಿಲ್ಲಿ : “ನನ್ನ ಹಣ ತೆಗೆದುಕೊಳ್ಳಿ; ಸಾಲದ ಹೊರೆಯಿಂದ ನಲುಗುತ್ತಿರುವ ಜೆಟ್‌ ಏರ್‌ ವೇಸ್‌ ಸಂಸ್ಥೆಯನ್ನು ಪಾರು ಮಾಡಿ’ ಎಂದು ಭಾರತೀಯ ಬ್ಯಾಂಕುಗಳಿಗೆ 9,000 ಕೋಟಿ ರೂ. ಸಾಲ ಬಾಕಿ ಇರಿಸಿ ವಿದೇಶಕ್ಕೆ ಪಲಾಯನಗೈದು ಇದೀಗ ಲಂಡನ್‌ನಿಂದ ಭಾರತಕ್ಕೆ ಗಡೀಪಾರಾಗುವ ಹಂತದಲ್ಲಿರುವ ದೇಶಭ್ರಷ್ಟ ಅರ್ಥಿಕ ಅಪರಾಧಿ ವಿಜಯ್‌ ಮಲ್ಯ ಹೇಳಿದ್ದಾರೆ.

“ನಾನಿದನ್ನು ಪುನರುಚ್ಚರಿಸುತ್ತಿದ್ದೇನೆ; ನನ್ನ ನಗದು ಸೊತ್ತುಗಳನ್ನು ನಾನು ಮಾನ್ಯ ಕರ್ನಾಟಕ ಹೈಕೋರ್ಟ್‌ ಮುಂದೆ ಇರಿಸಿದ್ದೇನೆ; ನನ್ನ ಬ್ಯಾಂಕ್‌ ಸಾಲ ಮತ್ತು ಇತರ ಸಾಲಗಾರರಿಗೆ ನಾನು ಇರಿಸಿರುವ ಬಾಕಿಯನ್ನು ಪಾವತಿಸಲು ಅದನ್ನು ಉಪಯೋಗಿಸಿ; ಜೆಟ್‌ ಏರ್‌ ವೇಸ್‌ ಸಂಸ್ಥೆಯನ್ನು ಪಾರುಗೊಳಿಸಲು ಬೇರೇನೂ ಇಲ್ಲದಿದ್ದಲ್ಲಿ ನನ್ನ ಈ ಹಣವನ್ನೇ ಬಳಸಿಕೊಳ್ಳಿ’ ಎಂದು ವಿಜಯ ಮಲ್ಯ ಟ್ವೀಟ್‌ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

“ಭಾರತದ ಪಿಎಸ್‌ಯು ಬ್ಯಾಂಕುಗಳು ಜೆಟ್‌ ಏರ್‌ ವೇಸ್‌ ಸಂಸ್ಥೆಯನ್ನು ಪಾರುಗೊಳಿಸಲು ನೆರವಾಗಿವೆ ಎಂಬುದನ್ನು ತಿಳಿದು ನನಗೆ ಸಂತಸವಾಗಿದೆ. ಇದರಿಂದಾಗಿ ಅನೇಕ ಉದ್ಯೋಗ, ಸಂಪರ್ಕ ವ್ಯವಸ್ಥೆ ಮತ್ತು ಉದ್ಯಮ ಉಳಿಯಲು ಸಾಧ್ಯವಾಗಿದೆ.

ಕಿಂಗ್‌ ಫಿಶರ್‌ ಸಂದರ್ಭದಲ್ಲಿ ಬ್ಯಾಂಕುಗಳು ಇದನ್ನೇ ಮಾಡಿರಬೇಕಿತ್ತು ಎಂದು ಅನ್ನಿಸುತ್ತಿದೆ’ ಎಂದು ಮಲ್ಯ ತಮ್ಮ ಟ್ವೀಟ್‌ ನಲ್ಲಿ ಹೇಳಿದ್ದಾರೆ.