Saturday, June 13, 2026
ಸುದ್ದಿ

ಬಂಟ್ವಾಳದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ – ಕಹಳೆ ನ್ಯೂಸ್

ಬಂಟ್ವಾಳ: ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಮತ್ತು ಸವಾರರ ಮೇಲೆ ಬಂಟ್ವಾಳ ಡಿ.ವೈ.ಎಸ್.ಪಿ. ಹಾಗೂ ಬಂಟ್ವಾಳ ಸಾರಿಗೆ ಅಧಿಕಾರಿಗಳು ಏಕಕಾಲದಲ್ಲಿ ಕಾರ್ಯಾಚರಣೆ ಮಾಡಿದ ಘಟನೆ ನಡೆದಿದೆ.

ಜಾಹೀರಾತು

ಬಂಟ್ವಾಳ ಸಬ್ ಡಿವಿಷನ್ ವಿಭಾಗದ 22 ಅಧಿಕಾರಿಗಳು ರಸ್ತೆಗಿಳಿದು ವಾಹನ ತಪಾಸಣೆ ನಡೆಸಿ ಸುಮಾರು 800 ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಒಟ್ಟು ಪ್ರಕರಣಗಳಲ್ಲಿ 1.25 ಲಕ್ಷ ರೂ ದಂಡ ವಿಧಿಸಿದ್ದಾರೆ. ಅಂತೆಯೇ ವಾಹನಗಳ ದಾಖಲಾತಿ ಇಲ್ಲದೆ ಮತ್ತು ವಿಮೆ ಇಲ್ಲದ ವಾಹನಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮುಖ್ಯವಾಗಿ ಈ ಕಾರ್ಯಚರಣೆಯಲ್ಲಿ ಅಧಿಕಾರಿಗಳು ನಿಯಮ ಉಲ್ಲಂಘಿಸಿದ ದ್ವಿಚಕ್ರ ಸವಾರರನ್ನು ಬೆವರಿಳಿಸಿದರು.