Tuesday, April 28, 2026
ಸುದ್ದಿ

ಆನಂದ್ ಸಿಂಗ್ ಹಲ್ಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಬಂಧನ – ಕಹಳೆ ನ್ಯೂಸ್

ಬೆಂಗಳೂರು: ಶಾಸಕ ಆನಂದ್ ಸಿಂಗ್ ಹಲ್ಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕಂಪ್ಲಿ ಶಾಸಕ ಜೆ.ಎನ್ .ಗಣೇಶ್ ಬಂಧನವಾಗಿದೆ.

ರಾಮನಗರ ಪೊಲೀಸರು ಶಾಸಕ ಕಂಪ್ಲಿ ಗಣೇಶ್​​ರನ್ನು ಹೊರರಾಜ್ಯದಲ್ಲಿ ಅರೆಸ್ಟ್ ಮಾಡಿರುವುದು ಪಕ್ಕಾ. ಆದ್ರೆ, ಯಾವ ಸ್ಥಳದಲ್ಲಿ ಬಂಧಿಸಿದ್ದಾರೆ ಎನ್ನುವುದು ಖಚಿತ ಮಾಹಿತಿ ಇಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ರಾತ್ರಿ ವೇಳೆಗೆ ಗಣೇಶ್​​ರನ್ನು ರಾಮನಗರಕ್ಕೆ ಕರೆತರುವ ಸಾಧ್ಯತೆ ಇದೆ. ಬಳಿಕ, ಕೋರ್ಟ್​​ ಮುಂದೆ ಹಾಜರುಪಡಿಸುತ್ತಾರೆ ಎಂದು ತಿಳಿದುಬಂದಿದೆ.

ಜ. 20 ರಂದು ಈಗಲ್ಟನ್ ರೆಸಾರ್ಟ್‌ನಲ್ಲಿ ಕಂಪ್ಲಿ ಶಾಸಕ ಗಣೇಶ್ ಅವರು ವಿಜಯನಗರ (ಹೊಸಪೇಟೆ)  ಶಾಸಕ ಆನಂದ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು.

ಘಟನೆಯ ನಂತ್ರ, ಗಣೇಶ್​ ತಲೆ ಮರೆಸಿಕೊಂಡಿದ್ದರು. ಈ ನಡುವೆ, ನಿನ್ನೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್​​​ನಲ್ಲಿ ತಮ್ಮ ವಕೀಲರ ಮೂಲಕ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಾಪಸ್​ ತೆಗೆದುಕೊಂಡಿದ್ದರು.