Monday, April 27, 2026
ಸುದ್ದಿ

ನೆಲ್ಯಾಡಿಯಿಂದ ಬೆಂಗಳೂರು ರಾಷ್ಟೀಯ ಹೆದ್ದಾರಿಯಲ್ಲಿ ಭಾರೀ ಬೆಂಕಿ ಅವಘಡ: ಲಾರಿ ಸುಟ್ಟು ಭಸ್ಮ – ಕಹಳೆ ನ್ಯೂಸ್

ಉದನೆ: ನೆಲ್ಯಾಡಿಯಿಂದ ಬೆಂಗಳೂರು ರಾಷ್ಟೀಯ ಹೆದ್ದಾರಿ ಉದನೆ ಎಂಬಲ್ಲಿ ಭಾರೀ ಬೆಂಕಿ ಅವಘಡ ತಡ ರಾತ್ರಿ ಸುಮಾರು 10ಗಂಟೆ ಗೆ ಸಿಮೆಂಟ್ ಹೇರಿಕೊಂಡು ಹೋಗುತಿದ್ದ ಲಾರಿ ಸಂಪೂರ್ಣ ಸುಟ್ಟು ಭಸ್ಮ ಆಗಿದೆ.

ಯಾರಿಗೆ ಸೇರಿದ ಲಾರಿ ಎಂದು ಮಾಹಿತಿ ಇಲ್ಲ ಪೊಲೀಸ್ ತನಿಖೆಯಿಂದ ತಿಳಿಬೇಕಿದೆ. ವಿಷಯ ತಿಳಿದ ಉಪ್ಪಿನಂಗಡಿ SI ನಂದಕುಮಾರ್ ಹಾಗು ತಂಡ ನೆಲ್ಯಾಡಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಶೇಖರ್ ಹಾಗು ತಂಡದವರು ತಕ್ಷಣ ಭೇಟಿ ನೀಡಿ ತನಿಖೆ ಕೈ ಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಪೊಲೀಸ್ ತನಿಖೆ ವೇಳೆ ಲಾರಿಗೆ ಸಂಬಂಧ ಪಟ್ಟ ಡ್ರೈವರ್ ಇರಲಿಲ್ಲ ಎಂದು ಪೊಲೀಸ್ ಇಲಾಖೆಯಿಂದ ಮಾಹಿತಿ ಬಂದಿದೆ. ಪುತ್ತೂರು ಅಗ್ನಿಶಾಮಕ ದಳ ಸಿಬಂದಿಗಳು ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ ಆದರೆ ಲಾರಿ ಸಂಪೂರ್ಣ ಸುಟ್ಟು ಹೋಗಿದೆ.

ವರದಿ ಶಿವ ಭಟ್ ಕಹಳೆ ನ್ಯೂಸ್