Sunday, April 26, 2026
ಸುದ್ದಿ

ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿದೆ ಕಡ್ಯ ಗ್ರಾಮದಲ್ಲಿನ ಬಿ.ಎಸ್.ಏನ್.ಎಲ್ ಟವರ್ – ಕಹಳೆ ನ್ಯೂಸ್

ಕಡಬ: ತಾಲೂಕಿನ ಕಡ್ಯ ಗ್ರಾಮದ ಕೋಣಾಜೆಯಲ್ಲಿ ಊಟಕ್ಕಿಲ್ಲದ ಉಪ್ಪಿನಕಾಯಿಯಂತಿರುವ ಬಿ.ಎಸ್.ಎನ್.ಎಲ್ ಮೊಬೈಲ್ ಟವರ್. ಈ ಟವರ್ ನಲ್ಲಿ ವಾರದಲ್ಲಿ 4 ದಿನ ನೆಟ್ವರ್ಕ್ ಇರೊದಿಲ್ಲ. ಬೆಳಿಗ್ಗೆ ನೆಟ್ವರ್ಕ್ ಇದ್ದರೆ ರಾತ್ರಿ ಇರುವುದಿಲ್ಲ. ರಾತ್ರಿ ನೆಟ್ವರ್ಕ್ ಇದ್ದರೆ ಬೆಳಿಗ್ಗೆ ಇರುವುದಿಲ್ಲ.

ಈ ಮೊಬೈಲ್ ಟವರ್ ವ್ಯಾಪ್ತಿಯಲ್ಲಿ ಸುಮಾರು 300ಕ್ಕಿಂತಲೂ ಹೆಚ್ಚು ಮನೆಗಳಿದ್ದು ಟವರ್ ಆದ ಕೂಡಲೆ ಮನೆಗಳಲ್ಲಿದ್ದ ಲಾಂಡ್ ಫೊನ್ ಸಂಪರ್ಕ ಕಡಿತಗೊಳಿಸಿದ ಕಾರಣ, ಇದೀಗ ದೂರ ದೂರುಗಳಲ್ಲಿರುವ ಸಂಬಂದಿಕರೊಡನೆ ಮಾತನಾಡಲು ಜನರು ನೆಟ್ವರ್ಕ್ ಹುಡುಕಿಕೊಂಡು ಬೆಟ್ಟ ಗುಡ್ಡ ಇರುವ ಪ್ರದೇಶಗಳಿಗೆ ಹೋಗುವ ಪರಿಸ್ಥಿತಿ ಎದುರಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆಯ ಬಗ್ಗೆ ಗಮನ ಹರಿಸಿ ಪರಿಹರಿಸಿದರೆ ಒಳ್ಳೆಯದು ಎಂಬುದು ಗ್ರಾಮದ ಜನತೆಯ ಅಭಿಪ್ರಾಯವಾಗಿದೆ.