Wednesday, March 18, 2026
ಸುದ್ದಿ

ಹೊಸ ವರುಷದ ಸಂಭ್ರಮ ಸವಿಯಲು ಸಿಎಂ ವಿದೇಶ ಪ್ರಯಾಣ – ಕಹಳೆ ನ್ಯೂಸ್

ಹೊಸ ವರುಷದ ಸಂಭ್ರಮವನ್ನು ಸವಿಯಲು ಸಿಎಂ ವಿದೇಶದ ಪ್ರಯಾಣ ಬೆಳೆಸಲಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ರಾಜಕೀಯ ಜಂಜಾಟದಿಂದ ದೂರವಿರಲು ಹೊಸ ವರ್ಷದ ಹೊಸ್ತಿಲಿನಲ್ಲ ಬಳಸಿಕೊಳ್ಳುತ್ತಿದ್ದಾರೆ.

ವಿಶ್ರಾಂತಿ ಪಡೆಯುವುದರ ಜೊತೆ ಜೊತೆಗೆ ಹೊಸ ವರ್ಷಾಚರಣೆ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕುಟುಂಬ ಸಮೇತರಾಗಿ ವಿದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆಂದು ಮೂಲಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲವು ವರ್ಷಗಳಿಂದ ಹೊಸ ವರ್ಷದ ಸಂಭ್ರಮವನ್ನು ಕುಮಾರಸ್ವಾಮಿ ಕುಟುಂಬ ವಿದೇಶದಲ್ಲಿ ಆಚರಣೆ ಮಾಡಿಕೊಳ್ಳುತ್ತಿದ್ದು, ಈ ವರ್ಷವೂ ಸಹ ವಿದೇಶದಲ್ಲಿ ನೂತನ ವರ್ಷವನ್ನು ಬರಮಾಡಿಕೊಳ್ಳಲಿದ್ದಾರೆ.

ಜಾಹೀರಾತು
ಜಾಹೀರಾತು

ಈ ಬಾರಿ ತಮ್ಮ ಪ್ರಯಾಣವನ್ನ ಸಿಂಗಾಪುರದತ್ತ ನಡೆಸಲಿದ್ದು, ಪತ್ನಿ ಅನಿತಾ ಕುಮಾರಸ್ವಾಮಿ, ಮಗ ನಿಖಿಲ್ ಅವರೊಂದಿಗೆ ಕುಮಾರಸ್ವಾಮಿಯವರು ಶುಕ್ರವಾರ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಲಿದ್ದಾರೆಂದು ತಿಳಿದುಬಂದಿದೆ.

5 ದಿನಗಳ ಕಾಲ ಸಿಂಗಾಪುರದಲ್ಲಿ ಕುಮಾರಸ್ವಾಮಿಯವರು ವಿಶ್ರಾಂತಿ ಪಡೆದು, ಆರೋಗ್ಯಕ್ಕೂ ವಿಶ್ರಾಂತಿ ಅಗತ್ಯವಿರುವ ಹಿನ್ನಲೆಯಲ್ಲಿ ವಿದೇಶ ಪ್ರವಾಸ ಸಹಕಾರಿಯಾಗಲಿದೆ.

ಜ.2 ರಂದು ಪ್ರವಾಸ ಅಂತ್ಯಗೊಳಿಸಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಗಳಾದ ಬಳಿಕ ಇದೇ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ.