Saturday, May 9, 2026
ಸುದ್ದಿ

ಬೃಹತ್ ಕುಳಿಯ ಅದ್ಭುತ ಚಿತ್ರ ಸೆರೆ ಹಿಡಿದ ಮಾರ್ಸ್ ಎಕ್ಸ್ಪ್ರೆಸ್ – ಕಹಳೆ ನ್ಯೂಸ್

ಪ್ರತಿ ನಿತ್ಯ ಹೊಸತನದ ಹುಡುಕಾಟದಲ್ಲಿರುವ ವಿಜ್ಞಾನಿಗಳಿಗೆ, ಇದೀಗ ಹೊಸ ವಿಚಾರವೊಂದು ಹುಮ್ಮಸ್ಸು ಹೆಚ್ಚುವವಂತೆ ಮಾಡಿದೆ. ಮಂಗಳ ಗ್ರಹದ ಅಧ್ಯಯನಕ್ಕೆ ತೆರಳಿರುವ ‘ಮಾರ್ಸ್ ಎಕ್ಸ್ಪ್ರೆಸ್’ ನೌಕೆ ಹಿಮದಿಂದ ಕೂಡಿರುವ ಬೃಹತ್ ಕುಳಿಯೊಂದರ ಅದ್ಭುತ ಚಿತ್ರವೊಂದನ್ನು ಸೆರೆ ಹಿಡಿದಿದೆ.

ಅಂಗಾರಕನ ಉತ್ತರ ಧ್ರುವದ ತುದಿಯಲ್ಲಿ ಕೊರೊಲೆವ್ ಕುಳಿ ಎಂದು ಕರೆಯಲಾಗುವ ಸ್ಥಳದಲ್ಲಿ 81.4 ಕಿ.ಮೀನಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಕುಳಿಯನ್ನು ಹೆಚ್ಚೂಕಡಿಮೆ ಹಿಮದ ತುಣುಕುಗಳು ತುಂಬಿಕೊಂಡಿರುವ ಮನಮೋಹಕ ಚಿತ್ರ ವಿಜ್ಞಾನಿಗಳನ್ನು ಚಕಿತಗೊಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳನ ಅಂಗಳದಲ್ಲಿ ಹಸಿರು ಕವಲೊಡೆದು ಮನುಷ್ಯನಿಗೆ ವಾಸಕ್ಕೆ ಯೋಗ್ಯವಾಗುವಂತಿದೆ. ಮಂಗಳ ಗ್ರಹದಲ್ಲಿ ನೀರಿನ ಅಂಶಗಳಿವೆ ಎನ್ನುವುದನ್ನು ಈಗಾಗಲೇ ಸಂಶೋಧನೆಗಳು ಕಂಡುಕೊಂಡಿವೆ. ಅದರಲ್ಲಿಯೂ ಹಿಮದ ಪ್ರಮಾಣ ಅಲ್ಲಲ್ಲಿ ಪತ್ತೆಯಾಗಿವೆ.

ಸರೋವರಗಳಷ್ಟು ವಿಶಾಲವಾದ ಬೃಹತ್ ಕುಳಿಗಳಲ್ಲಿ ಇಷ್ಟು ಹಿಮ ಕಂಡಿರುವುದು ಇದೇ ಮೊದಲು.
ಭೂಮಿಯಂತೆಯೇ ಮಂಗಳ ಗ್ರಹದಲ್ಲಿಯೂ ಹವಾಮಾನ ಅವಧಿಗೆ ಅನುಗುಣವಾಗಿ ಬದಲಾಗುತ್ತದೆ. ಬೇಸಿಗೆಯಲ್ಲಿ ಇಲ್ಲಿ ಕರಗುವಂತೆ, ಅಲ್ಲಿಯೂ ಹಿಮದ ಪ್ರಮಾಣ ಕಡಿಮೆಯಾಗುತ್ತದೆ.

ಆದರೆ, ಯಾವುದೋ ಕಾಲದಲ್ಲಿ ಮಂಗಳ ಗ್ರಹದಲ್ಲಿನ ಯಾವುದೋ ಘಟನೆಯಿಂದ ಸೃಷ್ಟಿಯಾದ ಕೊರೊಲೆವ್ ಕುಳಿಯಲ್ಲಿ ಹಿಮದ ಪ್ರಮಾಣ ಹಾಗೆಯೇ ಇದೆ. ಅಂದಹಾಗೆ ಈ ಕುಳಿಗೆ ನಾಮಕರಣ ಮಾಡಿರುವುದು ಸೋವಿಯತ್‌ನ ರಾಕೆಟ್ ಎಂಜಿನಿಯರ್ ಸರ್ಜೈ ಕೊರೊಲೆವ್ ಅವರ ಹೆಸರನ್ನು.

ಕೋಲ್ಡ್ ಟ್ರ‍್ಯಾಪ್’ ಎಂದು ಕರೆಯಲಾಗುವ ಭೌಗೋಳಿಕ ಲಕ್ಷಣವು ಈ ಕುಳಿಯಲ್ಲಿ ಕಂಡುಬಂದಿದೆ. ಈ ಕುಳಿಯು ಬಹಳ ಆಳವಾಗಿದ್ದು, ಮೇಲ್ಭಾಗದಿಂದ 2 ಕಿ.ಮೀ.ಗೂ ಅಧಿಕವಿದೆ. ನೆಲಮಟ್ಟದಿಂದ ಇರುವ ನೀರಿನ ಹಿಮವು 1.8 ಕಿ.ಮೀ. ಎತ್ತರದವರೆಗೂ ತುಂಬಿಕೊಂಡಿದ್ದು, 60 ಕಿ.ಮೀ. ವಿಸ್ತೀರ್ಣ ವ್ಯಾಪಿಸಿದೆ. ಇದರಲ್ಲಿನ ಹಿಮದ ಪ್ರಮಾಣವು 2,200 ಕ್ಯುಬಿಕ್ ಕಿ.ಮೀಯಷ್ಟಿದೆ. ಜೊತೆಗೆ ಮಂಗಳದ ಅಂಗಳದಲ್ಲಿನ ದೂಳು ಸಹ ಇದೆ.