
ಮಂಗಳೂರು: ನವರಾತ್ರಿ ಹಾಗೂ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಕರಾವಳಿ ಮತ್ತು ಮಲೆನಾಡಿನ ಪ್ರಮುಖ ಧಾರ್ಮಿಕ, ಪ್ರವಾಸಿ ಕ್ಷೇತ್ರಗಳನ್ನು ಸಂದರ್ಶಿಸಲು ಕೆಎಸ್‌ಆರ್‌ಟಿಸಿ (KSRTC) ಮಂಗಳೂರಿನಿಂದ ವಿವಿಧ ವಿಶೇಷ ‘ದಸರಾ ಟೂರ್ ಪ್ಯಾಕೇಜ್’ ಬಸ್ ಸೇವೆಗಳನ್ನು ಘೋಷಿಸಿದೆ. ಭಕ್ತಾದಿಗಳು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಕೈಗೆಟುಕುವ ದರದಲ್ಲಿ ಹಲವು ಪ್ಯಾಕೇಜ್‌ಗಳನ್ನು ರೂಪಿಸಲಾಗಿದೆ.
ಈ ವಿಶೇಷ ಬಸ್ ಸೇವೆಗಳು ಅಕ್ಟೋಬರ್ 11 ರಿಂದ ಅಕ್ಟೋಬರ್ 20 ರವರೆಗೆ ಪ್ರತಿದಿನ ಲಭ್ಯವಿರಲಿವೆ.
ಮಂಗಳೂರು ದಸರಾ ನವದುರ್ಗಾ ದರ್ಶನ
ಮಂಗಳೂರಿನಿಂದ ಬೆಳಗ್ಗೆ 8 ಗಂಟೆಗೆ ಮಂಗಳೂರಿನಿಂದ ಹೊರಡುವ ಬಸ್ ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಬೋಳಾರ ಮಾರಿಯಮ್ಮ ದೇವಸ್ಥಾನ, ಮಂಗಳಾದೇವಿ, ಪೊಳಲಿ ರಾಜರಾಜೇಶ್ವರಿ, ಹೊಸನಾಡು ಕೊಡ್ಯಡ್ಕ ಅನ್ನಪೂರ್ಣೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ, ಸಸಿಹಿತ್ಲು ಭಗವತಿ, ಚಿತ್ರಾಪುರ ದುರ್ಗಾಪರಮೇಶ್ವರಿ, ಉರ್ವ ಮಾರಿಯಮ್ಮ ಹಾಗೂ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಗಳಿಗೆ ತೆರಳಿ ರಾತ್ರಿ 8.30ಕ್ಕೆ ಮಂಗಳೂರಿಗೆ ವಾಪಸ್ ಆಗಲಿದೆ. ವಯಸ್ಕರಿಗೆ Rs 500 ದರ ನಿಗದಿಪಡಿಸಲಾಗಿದೆ.
ಮಂಗಳೂರು–ತಲಕಾವೇರಿ–ಭಾಗಮಂಡಲ
ಮಂಗಳೂರಿನಿಂದ ಬೆಳಗ್ಗೆ 7 ಗಂಟೆಗೆ ಆರಂಭವಾಗುವ ಈ ಪ್ರವಾಸದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ತಲಕಾವೇರಿ, ಭಗಂಡೇಶ್ವರ ದೇವಸ್ಥಾನ, ತ್ರಿವೇಣಿ ಸಂಗಮ, ಅಬ್ಬಿ ಜಲಪಾತ ಹಾಗೂ ರಾಜಾಸೀಟ್‌ಗೆ ಭೇಟಿ ನೀಡಲಾಗುತ್ತದೆ. ರಾತ್ರಿ 9.30ಕ್ಕೆ ಮಂಗಳೂರಿಗೆ ಮರಳಲಿದೆ. ವಯಸ್ಕರಿಗೆ Rs 600 ದರ ನಿಗದಿಪಡಿಸಲಾಗಿದೆ.
ಮಂಗಳೂರು–ಕೊಲ್ಲೂರು
ಮಂಗಳೂರಿನಿಂದ ಬೆಳಗ್ಗೆ 8 ಗಂಟೆಗೆ ಹೊರಡುವ ಬಸ್ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ, ಕಾಪು ಮಾರಿಯಮ್ಮ, ಮಂದಾರ್ತಿ ದುರ್ಗಾಪರಮೇಶ್ವರಿ, ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ, ಕೊಲ್ಲೂರು ಮೂಕಾಂಬಿಕಾ ಹಾಗೂ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನಗಳಿಗೆ ತೆರಳಲಿದೆ. ರಾತ್ರಿ 8ಕ್ಕೆ ಮಂಗಳೂರಿಗೆ ವಾಪಸ್ ಆಗಲಿದೆ. ವಯಸ್ಕರಿಗೆ Rs 600 ದರ ನಿಗದಿಪಡಿಸಲಾಗಿದೆ.











