Tuesday, September 29, 2026
ಸುದ್ದಿ

ಸಂತ ಫಿಲೋಮಿನಾ ಪ. ಪೂ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ- ಕಹಳೆ ನ್ಯೂಸ್

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ದ.ಕ ಜಿಲ್ಲೆ ಮಂಗಳೂರು ಹಾಗೂ ಮದನಿ ಪ.ಪೂ ಕಾಲೇಜು ಅಲೇಕಳ, ಉಳ್ಳಾಲ ಇದರ ಜಂಟಿ ಆಶ್ರಯದಲ್ಲಿ ಸೆ 26
ರಂದು ಯೆನೆಪೋಯ ಆಯುಷ್ ಕ್ಯಾಂಪಸ್ ನರಿಂಗಾನ, ಮಂಜನಾಡಿಯಲ್ಲಿ ನಡೆದ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ  ಸಂತ ಫಿಲೋಮಿನಾ ಪ. ಪೂ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ಜಾಹೀರಾತು

ದ್ವಿತೀಯ ವಾಣಿಜ್ಯ ವಿಭಾಗದ ಶಿಹಾಮ್  ಬೆಸ್ಟ್ ಡಿಫೆಂಡರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ದ್ವಿತೀಯ ವಾಣಿಜ್ಯ ವಿಭಾಗದ ಮೊಹಮ್ಮದ್ ಅಸ್ಲಾಂ ದಾನಿಶ್, ಮಹಮ್ಮದ್ ರಾಫಿ, ಕೆ ಮೊಹಮ್ಮದ್ ಅನಾನ್, ಮಹಮ್ಮದ್ ರಾಹಿಲ್  ಇದ್ರಿಸ್ ಹಾಗೂ ಶಿಹಾಮ್ ಮೈಸೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.          ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ  ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು