Recent Posts

Sunday, September 27, 2026
ಸುದ್ದಿ

ಅಮೃತ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ (ರಿ.), ಮಾಲಾಡಿ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ವರದಿ-ಕಹಳೆ ನ್ಯೂಸ್

ಅಮೃತ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ (ರಿ.),ಮಾಲಾಡಿ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ರೂಪ ಅವರ ಅಧ್ಯಕ್ಷತೆಯಲ್ಲಿ ಹಾಗೂ ಸರ್ವ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ, ಗ್ರಾಮ ಪಂಚಾಯತ್ ಮಾಲಾಡಿ ಇದರ ಸಭಾಭವನದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.

ಜಾಹೀರಾತು

ಕಾರ್ಯಕ್ರಮದ ವಿವರಗಳು:
* ಪ್ರಾರ್ಥನೆ ಹಾಗೂ ಸ್ವಾಗತ: ಶ್ರೀ ಗೌರಿ ಸಂಜೀವಿನಿ ಸಂಘದ ಸದಸ್ಯೆ ಶ್ರೀಮತಿ ವನಿತಾ ಅವರು ಪ್ರಾರ್ಥನೆಗೈದರು. ನಂತರ ಒಕ್ಕೂಟದ ಸಿಬ್ಬಂದಿಗಳು ಸಂಜೀವಿನಿ ಧ್ಯೇಯ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಎಲ್.ಸಿ.ಆರ್.ಪಿ (LCRP) ಯವರಾದ ಶ್ರೀಮತಿ ಶಕುಂತಲಾ ಅವರು ಸ್ವಾಗತ ಕೋರಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

* ದೀಪ ಪ್ರಜ್ವಲನೆ: ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ರೂಪ ಹಾಗೂ ವಲಯ ಮೇಲ್ವಿಚಾರಕಾರಾದ ಜಯಾನಂದ ಮತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿದರು.

* ಪ್ರಾಸ್ತಾವಿಕ ನುಡಿ: ವಲಯಮೇಲ್ವಿಚಾರಕಾರದ ಜಯಾನಂದ್ ಸರ್ ಸಭೆಯನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಸೂಚಿ ಹಾಗೂ ವರದಿ ಮಂಡನೆ:

* ವಾರ್ಷಿಕ ವರದಿ: mbk ಶಾರದ ಅವರು 2025-26ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿ, ಸಭೆಯ ಅನುಮೋದನೆಯನ್ನು ಪಡೆದುಕೊಂಡರು.

* ಜಮಾ ಖರ್ಚಿನ ವರದಿ: ಒಕ್ಕೂಟದ ಕಾರ್ಯದರ್ಶಿ ಯಾದ ಶ್ರೀಮತಿ ಸುನಿತಾ ಐತಲ್ ಅವರು 2025-26ನೇ ಸಾಲಿನ ಜಮಾ ಖರ್ಚಿನ ವರದಿಯನ್ನು ಮಂಡಿಸಿ, ಸಭೆಯಿಂದ ಅನುಮೋದನೆ ಪಡೆದರು
* ಒಕ್ಕೂಟದ ನಿಯಮಗಳು: ವಲಯ ಮೇಲ್ವಿಚಾರಕರಾದ ಜಯಾನಂದ ಸರ್ ಅವರು ಒಕ್ಕೂಟದ ನಿಯಮ-ನಿಬಂಧನೆಗಳು ಹಾಗೂ ಧ್ಯೇಯೋದ್ದೇಶಗಳನ್ನು ತಿಳಿಸಿಕೊಡುವುದರೊಂದಿಗೆ, ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು . ನೂತನ ಅಧ್ಯಕ್ಷರಾಗಿ ಶ್ರೀಮತಿ ತುಳಸಿ ಉಮೇಶ್ ಕಾರ್ಯದರ್ಶಿಯಾಗಿ ಶ್ರೀಮತಿ ಅಶ್ವಿನಿ ಉಪಾಧ್ಯಕ್ಷರಾಗಿ ಶ್ರೀಮತಿ ಖೈರುನ್ನಿಸ ಮತ್ತು ಕೋಶಾಧಿಕಾರಿಯಾಗಿ ಶ್ರೀಮತಿ ಜ್ಯೋತಿ ಆಯ್ಕೆಗೊಂಡರು.
ಗ್ರಾಮ ಪಂಚಾಯತ್ ಸಿಬ್ಬಂದಿ ವಿನಯ ರವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಜಾಗೃತಿ ಮೂಡಿಸಿದರು. ಅರ್ಹ ಫಲಾನುಭವಿಗಳು ಸರ್ಕಾರದ ವಿವಿಧ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಭಿವೃದ್ಧಿ ಅಧಿಕಾರಿಯಾದ ರಾಜಶೇಖರ್ ರೈ ಸರ್ ಸಭೆಯನ್ನುದ್ದೆಶಿಸಿ ಗ್ರಾಮ ಪಂಚಾಯತ್ ಹಾಗೂ ಒಕ್ಕೂಟದ ಸಹಯೋಗದೊಂದಿಗೆ ಲಭ್ಯವಿರುವ ಸೌಲಭ್ಯಗಳನ್ನು ಪಡೆದು ಮಹಿಳೆಯರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ವಾವಲಂಬಿ ಜೀವನ ನಡೆಸಬೇಕೆಂದು ಕರೆ ನೀಡಿದರು.

ಸನ್ಮಾನ ಹಾಗೂ ವಿಶೇಷ ಕಾರ್ಯಕ್ರಮಗಳು:
* ಒಕ್ಕೂಟದಿಂದ ನಿರ್ಗಮಿಸುವ ಸದಸ್ಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
* ಹೂಗುಚ್ಛ ಸ್ಪರ್ಧೆಯಲ್ಲಿ ಶ್ರೀ ದೇವಿ ಸಂಜೀವಿನಿ ಸಂಘದ ಸದಸ್ಯೆ ಶ್ರೀಮತಿ ಪ್ರೇಮ ಪ್ರಥಮ,ಸಂಗಮ ಸಂಜೀವಿನಿ ಸಂಘದ ಸದಸ್ಯೆ ಸಾವಣ್ಯ ದ್ವಿತೀಯ ಮತ್ತುನವದುರ್ಗ ಸಂಜೀವಿನಿ ಸಂಘದ ಸದಸ್ಯೆ ಶ್ರೀಮತಿ ಇಂದಿರಾ ಲಾವಣ್ಯ ತೃತೀಯ ಬಹುಮಾನ ಪಡೆದರು.
ಬಾಲ್ ಪಾಸಿಂಗ್ ಸ್ಪರ್ಧೆ ಯಲ್ಲಿ ಪ್ರಥಮ ಬಹುಮಾನ ಪ್ರೀತಿ ಸಂಜೀವಿನಿ ಸಂಘದ ಸದಸ್ಯೆ ಶ್ರೀಮತಿ ಆಯುಷ ಭಾನು ಮತ್ತು ದ್ವಿತೀಯ ಬಹುಮಾನ ಶ್ರೀ ಗೌರಿ ಸಂಜೀವಿನಿ ಸಂಘದ ಸದಸ್ಯೆ ಶ್ರೀಮತಿ ವನಿತಾ ಇವರು ಪಡೆದುಕೊಂಡರು.
ಇಂದಿನ ಮಹಾಸಭೆಯ ಲಕ್ಕಿ ಮಹಿಳೆ ಭಾಗ್ಯಶ್ರೀ ಸಂಜೀವಿನಿ ಸಂಘದ ಸದಸ್ಯೆ ಶ್ರೀಮತಿ ಸುಶೀಲ ಇವರಿಗೆ ಬಹುಮಾನ ನೀಡಲಾಯಿತು.
ಜೇನು ಕೃಷಿ, ಕಾಳು ಮೆಣಸು ಕೃಷಿ, ಹೈನುಗಾರಿಕೆ, ತರಕಾರಿ ಕೃಷಿ ಸ್ವಾವಲಂಬನೆ ಸಾಧಿಸುತ್ತಿರುವ ಸ್ನೇಹ ಸಂಜೀವಿನಿ ಸಂಘದ ಸದಸ್ಯೆ ಶ್ರೀಮತಿ ಗಿರಿಜಾ ಅವರನ್ನು ಸನ್ಮಾನಿಸಲಾಯಿತು.
*ನಮ್ಮ ಒಕ್ಕೂಟದ ಸಂಜೀವಿನಿ ಮಹಿಳೆಯರ ಮಕ್ಕಳು 90%ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ನಮ್ಮ ಒಕ್ಕೂಟದ ಸ್ವಚ್ಛ ಸಂಕಿರ್ಣ ಘಟಕದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಹಾಗೂ ವಲಯಮೇಲ್ವಿಚಾಕರಾದ ಜಯಾನಂದ್ ಇವರನ್ನು ಒಕ್ಕೂಟದ ವತಿಯಿಂದ ಗೌರವಿಸಲಾಯಿತು.

* ಕಾರ್ಯಕ್ರಮದ ಅಂಗವಾಗಿ ‘ಪೋಷಣಾ ಅಭಿಯಾನ’ (FNHW )ಮತ್ತು ಲಿಂಗತ್ವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸೊಣಂದೂರು ಗ್ರಾಮದ CHO ಐಶ್ವರ್ಯ ರವರು FNHW ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು. ಮಾಲಾಡಿ ಉಪ ಕೇಂದ್ರಅಯುಷ್ಮಾನ್ ಆರೋಗ್ಯ ಕೇಂದ್ರ CHO ಗಳಾದ ಜಯಶ್ರೀ ಮತ್ತು ಐಶ್ವರ್ಯ ಇವರುಗಳು NCD ಕ್ಯಾಂಪ್ ನಡೆಸಿದರು.

ಉಪಸ್ಥಿತಿ ಹಾಗೂ ವಂದನಾರ್ಪಣೆ:
ಈ ಕಾರ್ಯಕ್ರಮದಲ್ಲಿ ಎಲ್ಲಾ ಸಂಘಗಳ ಸದಸ್ಯರು,ಅಭಿವೃದ್ಧಿ ಅಧಿಕಾರಿ,ವಲಯ ಮೇಲ್ವಿಚಾರಕರು, ಪಂಚಾಯತ್ ಸಿಬ್ಬಂದಿಗಳು, ಒಕ್ಕೂಟದ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು,ಒಕ್ಕೂಟ ದ ಸಿಬ್ಬಂದಿವರ್ಗ ದವರು ಉಪಸ್ಥಿತರಿದ್ದರು. ಪಶು ಸಖಿ ಶ್ರೀಮತಿ ಜ್ಯೋಲಿನ್ ಎವರಿಸ್ಟ್ ತಾವ್ರೊ ವಂದನಾರ್ಪಣೆಗೈದರು ಹಾಗೂ ಶ್ರೀ ವಿನಾಯಕ ಸಂಜೀವಿನಿ ಸಂಘದ ಅಧ್ಯಕ್ಷರು ಶ್ರೀಮತಿ ತುಳಸಿ ಬಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.ರಾಷ್ಟ್ರಗೀತೆಯೊಂದಿಗೆ ಸಭೆ ಯನ್ನು ಮುಕ್ತಾಯಗೊಳಿಸಲಾಯಿತು.