
ಸುಳ್ಯ ತಾಲೂಕಿನ ಸುಳ್ಯ ನಗರದಲ್ಲಿ ಹಾಗೂ ಪೈಚಾರು ಬಸ್ ನಿಲ್ದಾಣಗಳಲ್ಲಿ ಬಿಕ್ಷಾಟನೆ ಮಾಡಿ ಬಸ್ಸು ತಂಗುದಾಣ ಆಶ್ರಯ ಪಡೆಯುತ್ತಿದ್ದ ಶಂಕರ ಬಿನ್ ಮಾಂಕು ಇವರು ಕಳೆದ ಮೂರು ವರ್ಷಗಳಿಂದ ಅನಾಥರಾಗಿರುತ್ತಾರೆ. ಇವರು ಸುಳ್ಯ ತಾಲೂಕಿನ ಜಾಲ್ಲೂರು ಗ್ರಾಮದ ಕೆಮ್ಮನ ಬಳಿ ಮನೆ ಪರಿಶಿಷ್ಟ ಪಂಗಡ ಸಮುದಾಯದ ಕುಟುಂಬಸ್ಥರಾಗಿದ್ದು ಪತ್ನಿ ಹಾಗೂ ಮಕ್ಕಳೊಂದಿಗೆ ಕೌಟುಂಬಿಕ ಕಲಹ ಹಿನ್ನಲೆಯಿಂದ ಮನೆಯನ್ನು ತೊರೆದಿರುತ್ತಾರೆ. ಇವರು ರಚನೆ ಮಹಿಳಾ ಸ್ವ ಅಭಿವೃದ್ಧಿ ಅಸಹಾಯಕರ ಸೇವಾ ಸಂಘ ನಿಯಮಿತ ಸುಳ್ಯ ಇವರಿಗೆ ದೂರು ನೀಡಿದಂತೆ ಮಾನ್ಯ ಗೌರವಾನ್ವಿತ ಉಪ ನಿರೀಕ್ಷಕರ ವರಿಗೆ ಮನವಿಯನ್ನು ಸಂಸ್ಥೆವತಿಯಿಂದ ಸಲ್ಲಿಸಿದ್ದು, ಉಪ ನಿರೀಕ್ಷಕರವರು ಶಂಕರ ಬಿನ್ ಮಾಂಕುರವರ ಕುಟುಂಬಸ್ಥರ ಉಪಸ್ಥಿಯಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸಿ, ಎಚ್ಚರಿಕೆ ನಿೀಡಿದ್ದು ಶಂಕರರವರ ಸ್ವ ಇಚ್ಚೆಯಂತೆ ಕುಟುಂಬಸ್ಥರೊಂದಿಗೆ ಸೇರ್ಪಡೆಗೊಳಿಸಿ ಮನೆಗೆ ಕಳುಹಿಸಲಾಯಿತು.










