Thursday, September 24, 2026
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಲಿಟ್ಲ್ ಫ್ಲವರ್ ಶಾಲೆ ದರ್ಬೆಯ ಬಾಲಕಿಯರು ಕಬಡ್ಡಿಯಲ್ಲಿ ಸತತ 8ನೇ ಬಾರಿಗೆ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ – ಕಹಳೆ ನ್ಯೂಸ್

ಪುತ್ತೂರು : ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ ಆಡಳಿತ ದಕ್ಷಿಣ ಕನ್ನಡ, ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಡಕಾರಂದೂರು ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14ರ ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಲಿಟ್ಲ್ ಫ್ಲವರ್ ಶಾಲೆ ದರ್ಬೆ ಪುತ್ತೂರು ಇಲ್ಲಿನ ಬಾಲಕಿಯರ ತಂಡ 14 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಸತತ 8ನೇ ಬಾರಿಗೆ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.

ಜಾಹೀರಾತು

ಉಮ್ಮುನಿಧಾ,ಉದ್ವಿತಾ ರಕ್ಷಾ ಶೃಜ್ಞಾ ಪಿ ಆಳ್ವ,ಖುಶಿ,ಯಶಸ್ವಿ ಪಿ ಯು ಆರ್ ಪರಿಣಿತ,ಪ್ರಣಮ್ಯ ರೈ,ಹರ್ಷಿತ ವೆಂಕಟೇಶ್ ಬುರುಡಿ,ತನ್ವಿಕಾ,ಇಂಚರ,ದೃತಿ ಕೆ ,ಚೈತಾಲಿ ಯಂ ಭಾಗವಹಿಸಿದರು. ಉಮ್ಮು ನಿಧಾ ಸವ್ಯಸಾಚಿ ಆಟಗಾರ್ತಿ ಹಾಗೂ ದಿಶಾ ಉತ್ತಮ ಹಿಡಿತಗಾರ್ತಿ ಪ್ರಶಸ್ತಿ ಪಡೆದುಕೊಂಡರು. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಐರಿನ್ ವೇಗಸ್ ರವರ ಮಾರ್ಗದರ್ಶನದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಾಷ್ಟ್ರೀಯ ಕಬಡ್ಡಿ ತರಬೇತುದಾರ ಬಾಲಕೃಷ್ಣ ರೈ ಪೊರ್ದಾಲ್ ತರಬೇತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು