Thursday, September 24, 2026
ಸುದ್ದಿ

ತರಬೇತಿ ಮುಗಿಸಿ‌ ವಾಪಸ್‌ ಬರುವಾಗ ದುರಂತ : ಅಮೆರಿಕದ ಮತ್ತೊಂದು F-16 ಯುದ್ಧವಿಮಾನ ಪತನ – ಕಹಳೆ ನ್ಯೂಸ್

ಬರ್ಲಿನ್: ತರಬೇತಿ ಹಾರಾಟ ಮುಗಿಸಿ ವಾಪಸ್‌ ತೆರಳುತ್ತಿದ್ದ ವೇಳೆ ಅಮೆರಿಕ ವಾಯುಪಡೆಗೆ ಸೇರಿದ ಎಫ್‌-16 ಯುದ್ಧ ವಿಮಾನ (F16 Fighter Jet) ಪತನಗೊಂಡಿರುವ ಘಟನೆ ಜರ್ಮನಿಯ ಪಶ್ಚಿಮ ಭಾಗದಲ್ಲಿರುವ ಸ್ಪಾಂಗ್‌ಡಾಹ್ಲೆಮ್‌ನಲ್ಲಿ ನಡೆದಿದೆ.
ಅಮೆರಿಕ ಸೇನೆ (US Military) ಈ ಕುರಿತು ಮಾಹಿತಿ ನೀಡಿದೆ. ಅಲ್ಲದೇ, ಇದು 5 ದಿನಗಳ ಅಂತರದಲ್ಲಿ ನಡೆದ 2ನೇ ದುರಂತವಾಗಿದೆ. 5 ದಿನಗಳ ಹಿಂದೆ ಮಿಚಿಗನ್‌ನಲ್ಲಿ ತರಬೇತಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಟೆಕ್ಸಾಸ್‌ ಏರ್‌ ನ್ಯಾಷನಲ್‌ ಗಾರ್ಡ್‌ಗೆ  ಸೇರಿದ F-16 ಯುದ್ಧವಿಮಾನ ಪತನಗೊಂಡಿತ್ತು.

ಜಾಹೀರಾತು

ಪೈಲಟ್‌ ಸೇಫ್‌
ಘಟನಾ ಸಂದರ್ಭದಲ್ಲಿ ಫೈಟರ್‌ ಪೈಲಟ್‌ ಸುರಕ್ಷಿವಾಗಿ ಜೆಟ್‌ನಿಂದ ಹೊರಕ್ಕೆ ಜಿಗಿದಿದ್ದಾರೆ (ಎಜೆಕ್ಟ್‌). ಗಾಯಗೊಂಡ ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಘಟನಾ ಸ್ಥಳದಲ್ಲಿ ತುರ್ತು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಅಪಘಾತಕ್ಕೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಈ ಕುರಿತು ತನಿಖೆ ಮುಂದುವರಿದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಈ F-16 ಯುದ್ಧವಿಮಾನವು ತರಬೇತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ 4 ಯುದ್ಧವಿಮಾನಗಳ ತಂಡದ ಭಾಗವಾಗಿತ್ತು. ಅಪಘಾತ ಸಂಭವಿಸಿದ ಬಳಿಕ ಉಳಿದ ಮೂರು F-16 ವಿಮಾನಗಳು ರಮ್ಸ್‌ಟೈನ್ ಏರ್‌ಬೇಸ್‌ಗೆ ಮಾರ್ಗ ಬದಲಿಸಿ ಸುರಕ್ಷಿತವಾಗಿ ಲ್ಯಾಂಡ್ ಆಗಿವೆ.

ಪೈಲಟ್‌ನ ಆರೋಗ್ಯ ಸ್ಥಿತಿ ಹಾಗೂ ಅಪಘಾತಕ್ಕೆ ಕಾರಣವಾದ ನಿಖರ ಪರಿಸ್ಥಿತಿಗಳ ಕುರಿತು ಅಮೆರಿಕ ಸೇನೆ ತಕ್ಷಣ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ತರಬೇತಿ ಕಾರ್ಯಾಚರಣೆಯ ಬಳಿಕ ಸಂಭವಿಸಿದ ಈ ಅಪಘಾತದಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದು, ಪೈಲಟ್ ವಿಮಾನದಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ ಎಂದು ವರದಿಯಾಗಿದೆ.