
ಉಪ್ಪಿನಂಗಡಿ: ಇಲ್ಲಿಯ ಸಮೀಪದ ಪೆರ್ನೆಯ ಮೈರಕಟ್ಟೆಯಲ್ಲಿ ಇಬ್ಬರು ಮಕ್ಕಳನ್ನು ಬಾವಿಗೆಸೆದು ಓರ್ವ ಕಂದನ ಸಾವಿಗೆ ಕಾರಣವಾದ ಆರೋಪಿತೆ ಮಹಿಳೆ ನೂರುನ್ನಿಸಾ ಗೆ ಪುತ್ತೂರು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಮೈರಕಟ್ಟೆ ನಿವಾಸಿಗಳಾದ ಸಿನಾನ್ ಹಾಗೂ ಅವರ ಪತ್ನಿ ನೂರುನ್ನಿಸಾ ಎಂಬವರ ಮಧ್ಯೆ ಫೋನ್‌ನಲ್ಲಿ ವೈವಾಹಿಕ ಕಲಹ ನಡೆದಿತ್ತು. ಇದರಿಂದ ಕೋಪಗೊಂಡ ಆರೋಪಿ ನೂರುನ್ನಿಸಾ ಮನೆಯಲ್ಲಿದ್ದ ಆಕೆಯ ಮೂರುವರೆ ವರ್ಷದ ಹೆಣ್ಣು ಮಗು ಹಾಗೂ ಆಕೆಯ ಗಂಡನ ತಂಗಿಯ ಸುಮಾರು ಮೂರು ವರ್ಷದ ಗಂಡು ಮಗುವನ್ನು ಮನೆ ಸಮೀಪದ ಬಾವಿಗೆಸೆದಿದ್ದಳು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಕೃತ್ಯ ನಡೆಸಿ ಮನೆಯಲ್ಲಿಯೇ ಇದ್ದ ನೂರುನ್ನಿಸಾಳನ್ನು ಬಂಧಿಸಿದ್ದರು. ಸೆ. 20ರಂದು ಈಕೆಯನ್ನು ಪುತ್ತೂರು ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಧೀಶರು ಆಕೆಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.










