ವಿಮಾನ ಟಿಕೆಟ್ ಬುಕಿಂಗ್ ವೇಳೆ ʻಡಾರ್ಕ್ ಪ್ಯಾಟರ್ನ್ʼ ಬಳಕೆ ಆರೋಪ : ಸ್ಪೈಸ್‌ಜೆಟ್ ಏರ್‌ಲೈನ್ಸ್‌ಗೆ 1 ಲಕ್ಷ ದಂಡ -ಕಹಳೆ ನ್ಯೂಸ್

ಹುಬ್ಬಳ್ಳಿ: ವಿಮಾನ ಟಿಕೆಟ್ ಬುಕಿಂಗ್ ವೇಳೆ ಗ್ರಾಹಕರನ್ನು ದಾರಿ ತಪ್ಪಿಸುವ ರೀತಿಯ ‘ಡಾರ್ಕ್ ಪ್ಯಾಟರ್ನ್’ ಬಳಕೆ ಮಾಡಿದ್ದ ಆರೋಪದ ಮೇಲೆ ಸ್ಪೈಸ್‌ಜೆಟ್ (Spicejet) ಏರ್‌ಲೈನ್ಸ್ ಸಂಸ್ಥೆಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) 1 ಲಕ್ಷ ರೂ. ದಂಡ ವಿಧಿಸಿದೆ.
ವಿಮಾನ ಟಿಕೆಟ್ ಬುಕ್ (Flight Ticket Booking) ಮಾಡುವ ವೇಳೆ ಗ್ರಾಹಕರ ಸ್ಪಷ್ಟ ಒಪ್ಪಿಗೆ ಪಡೆಯದೇ, ಪೂರ್ವನಿಯೋಜಿತ ಸಮ್ಮತಿ (Default Consent) ಹಾಗೂ ಪ್ರಚಾರಾತ್ಮಕ ಸಂದೇಶಗಳನ್ನು ಸ್ವಯಂಚಾಲಿತವಾಗಿ ಆಯ್ಕೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ವಿಚಾರ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರ ಗಮನಕ್ಕೆ ಬಂದ ಬಳಿಕ, ಪ್ರಕರಣದ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು.











