ಸಿಲ್ವರ್ ಝೋನ್ ಒಲಿಂಪಿಯಾಡ್ ಪರೀಕ್ಷೆ ಫಲಿತಾಂಶ : ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಭರಪೂರ ಪದಕಗಳು – ಕಹಳೆ ನ್ಯೂಸ್

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ 567 ವಿದ್ಯಾರ್ಥಿಗಳು 2025-26ನೇ ಸಾಲಿನ ಸಿಲ್ವರ್ ಝೋನ್ ಒಲಿಂಪಿಯಾಡ್ ಪರೀಕ್ಷೆಗೆ ಬರೆದಿದ್ದು, ಅದರಲ್ಲಿ 82 ಮಂದಿ ವಿದ್ಯಾರ್ಥಿಗಳು ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರ, 66 ವಿದ್ಯಾರ್ಥಿಗಳು ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರ, 52
ವಿದ್ಯಾರ್ಥಿಗಳು ಕಂಚಿನ ಪದಕ ಮತ್ತು ಪ್ರಶಸ್ತಿವನ್ನು ಪಡೆದುಕೊಂಡಿರುತ್ತಾರೆ.
ಪರೀಕ್ಷೆಗೆ ಸಂಬಂಧಿಸಿದಂತೆ ಗಣಿತ ವಿಷಯದಲ್ಲಿ 2ನೇ ತರಗತಿಯ ವಾತ್ಸಲ್ಯ ಹಾಗೂ ಯುವಾನ್, 1ನೇ ತರಗತಿಯ ಯದ್ವಿ ರೈ, ವಂಶಿಕ ವಿ ಪ್ರಭು 100ಕ್ಕೆ 100 ಅಂಕ ಗಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆರನೇ ತರಗತಿಯ ಸಂಹಿತ್ ಜೋಸ್ಸಿ ಲೋಬೊ, ಮೂರನೇ ತರಗತಿಯ ವೇದ್ಯಾ ಸರಸ್ವತಿ ಕ್ರಮವಾಗಿ ಇಂಗ್ಲೀಷ್ ಮತ್ತು ಗಣಿತ ವಿಷಯದಲ್ಲಿ ಶಾಲಾ ಹಂತದಿಂದ ಝೋನಲ್ ಹಂತದ ಪರೀಕ್ಷೆ ಬರೆದಿದ್ದು ಪ್ರಶಸ್ತಿ ಪತ್ರವನ್ನು ಪಡೆದು ಕೊಂಡಿರುತ್ತಾರೆ.
ಪದಕ ಗಳಿಸಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಗಳು ಅಭಿನಂದಿಸಿದ್ದಾರೆ.











