Friday, June 5, 2026
ಸುದ್ದಿ

ವಿಮಾನ ನಿಲ್ದಾಣದಲ್ಲಿ ದಿಢೀರ್‌ ಕುಸಿದುಬಿದ್ದ ವಿಮಾನದ ಮುಂಭಾಗ : ತಪ್ಪಿತು ದೊಡ್ಡ ದುರಂತ – ಕಹಳೆ ನ್ಯೂಸ್

ಬರ್ಲಿನ್‌: ಲುಫ್ಥಾನ್ಸಾ ಸಂಸ್ಥೆಯ ಬೋಯಿಂಗ್ 787-9 ಡ್ರೀಮ್‌ಲೈನರ್ ವಿಮಾನದ ಮುಂಭಾಗದ ಲ್ಯಾಂಡಿಂಗ್ ಗೇರ್ (ನೋಸ್ ಗೇರ್) ಇದ್ದಕ್ಕಿದ್ದಂತೆ ಕುಸಿದುಬಿದ್ದ ಘಟನೆ ಜರ್ಮನಿಯ  ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ  ನಡೆದಿದೆ.
ವಿಮಾನ ನಿಲ್ದಾಣದ ಗೇಟ್ A15 ರಲ್ಲಿ ಗುರುವಾರ ಜರ್ಮನಿ ಕಾಲಮಾನ  ಮಧ್ಯಾಹ್ನ 12:45 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಘಟನೆ ನಡೆದಾಗ ಪ್ರಯಾಣಿಕರು ಇನ್ನೂ ವಿಮಾನವನ್ನು ಹತ್ತಿರಲಿಲ್ಲ. ಆದರೆ ವಿಮಾನದ ಒಳಗಿದ್ದ ಇಬ್ಬರು ಕ್ಯಾಬಿನ್ ಸಿಬ್ಬಂದಿ ಮತ್ತು ಇಬ್ಬರು ಗ್ರೌಂಡ್ ಸಿಬ್ಬಂದಿ ಸೇರಿದಂತೆ ನಾಲ್ಕು ಜನ ನೌಕರರು ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಜಾಹೀರಾತು