Wednesday, June 3, 2026
ಜಿಲ್ಲೆಸುದ್ದಿಹಾಸನ

ಡ್ರಾಪ್‌ ಕೊಡುವ ನೆಪದಲ್ಲಿ ಅತ್ಯಾಚಾರ ಯತ್ನ : ಕೊಲೆ ಬೆದರಿಕೆಗೆ ಹೆದರಿ ಬೈಕ್‌ನಿಂದ ಜಿಗಿದ ಬಾಲಕಿ -ಕಹಳೆ ನ್ಯೂಸ್

ಹಾಸನ: ಕಾಲೇಜಿಗೆ ಡ್ರಾಪ್ ಕೊಡುವ ನೆಪದಲ್ಲಿ ಪರಿಚಯಸ್ಥ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ಹಾಸನದಲ್ಲಿ  ನಡೆದಿದೆ.
ಪದವಿ ಓದುತ್ತಿರುವ ಆರೋಪಿ, ಬಾಲಕಿಗೆ ಡ್ರಾಪ್‌ ಕೊಡುವುದಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ವಾಪಸ್‌ ಕರೆದುಕೊಂಡು ಬರುವಾಗ ಯಾರಿಗಾದ್ರೂ ಹೇಳಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಹೆದರಿದ ಬಾಲಕಿ ಬೈಕ್‌ನಿಂದ ಜಿಗಿದಿದ್ದಾಳೆ. ಬಾಲಕಿಗೆ ಗಂಭೀರ ಗಾಯಗಳಾಗಿದ್ದು, ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಜಾಹೀರಾತು

ಆರೋಪಿ ವಿದ್ಯಾಭ್ಯಾಸದ ಜೊತೆಗೆ ಪಾನಿಪುರಿ ಅಂಗಡಿ ನಡೆಸುತ್ತಿದ್ದ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗೆ ಸಾಥ್ ನೀಡಿರುವ ಇನ್ನಿಬ್ಬರು ಸ್ನೇಹಿತರನ್ನು ಪೊಲೀಸರು ಹುಡುಕುತ್ತಿದ್ದಾರೆ. ಈ ಸಂಬಂಧ ಹಾಸನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು